ಡಿಜಿಟಲ್ ಡೆಸ್ಕ್ : ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಗೆ ಪಾಕಿಸ್ತಾನದ ಪತರಗುಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಉಗ್ರ ಮಸೂದ್ ತನ್ನ 10 ಮಂದಿಯನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾನೆ. ಮಸೂದ್ ನ ಸಹೋದರ, ಸಹೋದರಿ ಸೇರಿ 10 ಮಂದಿ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ.
ಈ ದಾಳಿಯ ನಂತರ, ಮಸೂದ್ ಅಜರ್, ಈ ದಾಳಿಯಲ್ಲಿ ’ನಾನು ಕೂಡ ಸತ್ತಿದ್ರೆ ಚೆನ್ನಾಗಿತ್ತು’’ ಎಂದು ಹೇಳಿದ್ದಾನೆ.
ನವದೆಹಲಿ: ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಭಯೋತ್ಪಾದಕ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಜನರು ಸಾವನ್ನಪ್ಪಿದ್ದಾರೆ. ಭಾರತದ ದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ನಿಕಟ ಸಹಚರರು ಸೇರಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸ್ವತಃ ದೃಢಪಡಿಸಿದ್ದಾನೆ.
ಈ ದಾಳಿಯ ನಂತರ, ಮಸೂದ್ ಅಜರ್, ಈ ದಾಳಿಯಲ್ಲಿ ನಾನು ಸತ್ತಿದ್ರೆ ಚೆನ್ನಾಗಿತ್ತು ಎಂದು ಹೇಳಿದನು. “ಮೌಲಾನಾ ಕಶಾಫ್ ಅವರ ಇಡೀ ಕುಟುಂಬ ಮತ್ತು ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸಹೋದರಿ ಕೊಲ್ಲಲ್ಪಟ್ಟಿದ್ದಾರೆ ಮತ್ತು ಬಾಜಿ ಸಾದಿಯಾ ಅವರ ಪತಿ ಮುಫ್ತಿ ಅಬ್ದುಲ್ ರವೂಫ್ ಅವರ ಮೊಮ್ಮಕ್ಕಳು, ನಾಲ್ಕು ಮಕ್ಕಳು ಸೇರಿದಂತೆ ಹಿರಿಯ ಮಗಳು ಗಾಯಗೊಂಡಿದ್ದಾರೆ. ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ.ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಅಜರ್ ಕುಟುಂಬ ಸದಸ್ಯರು ಮತ್ತು ಹತ್ತಿರದ ಸಂಬಂಧಿಕರ ಅಂತ್ಯಕ್ರಿಯೆ ಇಂದು ನಡೆಯಲಿದೆ.ವೈಮಾನಿಕ ದಾಳಿಯಲ್ಲಿ ಮಸೂದ್ ಅಜರ್ ಕುಟುಂಬದ 10 ಮಂದಿ ಸಾವನ್ನಪ್ಪಿದ್ದರು.