ʼಬಿಸಿಸಿಐʼ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ ಮಾಜಿ ಕ್ರಿಕೆಟಿಗ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​ ಶನಿವಾರದಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರ ಹೆಸರನ್ನು ನೇರವಾಗಿ ತೆಗೆದುಕೊಳ್ಳದೇ ಹೋದರೂ ಸಹ ಐಸಿಸಿ ವಿಶ್ವಕಪ್​ 2023ರ ವೇಳಾಪಟ್ಟಿ ಅವ್ಯವಸ್ಥೆ ಬಗ್ಗೆ ತಮ್ಮ ಕೋಪವನ್ನು ಸೋಶಿಯಲ್​ ಮೀಡಿಯಾದಲ್ಲಿ ಹೊರ ಹಾಕಿದ್ದಾರೆ.

ಅಕ್ಟೋಬರ್​ – ನವೆಂಬರ್​​ನಲ್ಲಿ ಭಾರತದಲ್ಲಿ ನಡೆಯಲಿರುವ ಏಷ್ಯಾಕಪ್​ ಹಾಗೂ ಐಸಿಸಿ ವಿಶ್ವಕಪ್​ 2023ರ ಅಸಮರ್ಪಕ ನಿರ್ವಹಣೆ ಹಾಗೂ ವೇಳಾಪಟ್ಟಿ ಗೊಂದಲದ ಕಾರಣದಿಂದಾಗಿ ಬಿಸಿಸಿಐ ಸದ್ಯ ನ್ಯೂಸ್​ನಲ್ಲಿದೆ, ಶ್ರೀಲಂಕಾದ ಭಾರೀ ಮಳೆ ಏಷ್ಯಾಕಪ್​ ಮೇಲೆ ತೀವ್ರ ಪರಿಣಾಮ ಬೀರಿದೆ. ಇತ್ತ ಭಾರತೀಯ ಕ್ರಿಕೆಟ್​ ಮಂಡಳಿ ಸಾಕಷ್ಟು ತಡವಾಗಿ ಟಿಕೆಟ್​ ಮಾರಾಟ ಆರಂಭಿಸಿದ್ದರಿಂದ ವಿಶ್ವಕಪ್​​ ಪಂದ್ಯದಲ್ಲಿ ಟಿಕೆಟ್​ಗಳ ಕೊರತೆ ಉಂಟಾಗಿದೆ.

ಅಹಮದಾಬಾದ್​ನಲ್ಲಿ ಭಾರತ ಹಾಗೂ ಪಾಕಿಸ್ತಾನದ ಹೈ ಪ್ರೊಫೈಲ್ ಮ್ಯಾಚ್​ಗಳು ಸೇರಿದಂತೆ ಭದ್ರತಾ ಸಮಸ್ಯೆಯ ಕಾರಣದಿಂದಾಗಿ ಬಿಸಿಸಿಐ ಕೆಲವು ಪಂದ್ಯಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಬಿಸಿಸಿಐನ ಈ ಎಲ್ಲಾ ಗೊಂದಲಗಳು ಹಾಗೂ ತಪ್ಪು ನಿರ್ಧಾರಗಳನ್ನು ಗಮನದಲ್ಲಿಟ್ಟುಕೊಂಡು ವೆಂಕಟೇಶ್​ ಪ್ರಸಾದ್​ ಸೋಶಿಯಲ್​ ಮೀಡಿಯಾದಲ್ಲಿ ಬಿಸಿಸಿಐ ನಡೆಯನ್ನು ಹೀಯಾಳಿಸಿದ್ದಾರೆ. ಕ್ರೀಡಾಂಗಣದಲ್ಲಿ ವಿಶ್ವಕಪ್​ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳಿಗೆ ಸೂಕ್ತವಾಗಿ ಅವಕಾಶ ನೀಡಬೇಕು ಎಂದು ಬಿಸಿಸಿಐನ್ನು ಒತ್ತಾಯಿಸಿದ್ದಾರೆ.

ನಾವು ವಿಶ್ವಕಪ್​ ಮುಂದಾಳತ್ವ ವಹಿಸುವ ವಿಚಾರದಲ್ಲಿ ಎಡವುತ್ತಿದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ . ಮೊದಲ ಹಂತದ ವೇಳಾಪಟ್ಟಿಯಲ್ಲಿ ಅಸಮಂಜಸ ವಿಳಂಬ ಉಂಟಾಗಿದೆ. ಇದು ಸಾಲದು ಎಂಬಂತೆ ಐದು ಪಂದ್ಯಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ವಿಶ್ವಕಪ್​ ಪಂದ್ಯಕ್ಕೆ ಉಂಟಾಗಿರುವ ಟಿಕೆಟ್​ ವಿಳಂಬದಿಂದಾಗಿ ಬಿಸಿಸಿಐ ಬ್ಲಾಕ್​ ಟಿಕೆಟ್​ ಮಾರಾಟಕ್ಕೆ ಪುಷ್ಠಿ ನೀಡಿದಂತೆ ಆಗುತ್ತದೆ ಎಂದು ವೆಂಕಟೇಶ್​ ಪ್ರಸಾದ್ ಬೇಸರ ಹೊರಹಾಕಿದ್ದಾರೆ.

https://twitter.com/venkateshprasad/status/1700460772953096365

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read