Viral News : ಇದಕ್ಕೆ ಹೇಳೋದು ಪ್ರಾಣಿಗಳೇ ಗುಣದಲ್ಲಿ ಮೇಲು ಅಂತ..! : ಹೃದಯಸ್ಪರ್ಶಿ ವಿಡಿಯೋ ಭಾರಿ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ, ಧೈರ್ಯಶಾಲಿ ನಾಯಿಯೊಂದು ನೀರಿನಲ್ಲಿ ಸಿಕ್ಕಿಬಿದ್ದ ಸ್ನೇಹಿತ ನಾಯಿಯನ್ನು ರಕ್ಷಿಸಿದ ಹೃದಯಸ್ಪರ್ಶಿ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಗೇಬ್ರಿಯೆಲ್ ಕಾರ್ನೊ ಎಂಬುವವರು ಹಂಚಿಕೊಂಡಿರುವ ಈ ವೀಡಿಯೊ 387,000 ವೀಕ್ಷಣೆಗಳನ್ನು ಗಳಿಸಿದೆ. ಇದು ಈ ಎರಡು ಶ್ವಾನ ಸ್ನೇಹಿತರ ನಡುವಿನ ಅಸಾಧಾರಣ ಬಂಧವನ್ನು ಎತ್ತಿ ತೋರಿಸುತ್ತದೆ.

ಮೊದಲು ನಾಯಿಯೊಂದು ಕೋಲನ್ನು ತರಲು ಸಂತೋಷದಿಂದ ನದಿಗೆ ಹಾರುತ್ತದೆ. ಪ್ರವಾಹವು ಹೆಚ್ಚಾಗುತ್ತಿದ್ದಂತೆ ನಾಯಿ ಮೇಲೆ ಬರಲು ಸಾಧ್ಯವಾಗುವುದಿಲ್ಲ. ಕೂಡಲೇ ಅಲ್ಲೇ ಇದ್ದ ಇನ್ನೊಂದು ನಾಯಿ ಕೋಲನ್ನು ಕಚ್ಚಿ ಎಳೆದು ನಾಯಿಯನ್ನು ರಕ್ಷಿಸುತ್ತದೆ. ಸಂಪೂರ್ಣ ಧೈರ್ಯ ಮತ್ತು ನಿಷ್ಠೆಯ ಕ್ಷಣದಲ್ಲಿ, ನಾಯಿಯ ಅಲರ್ಟ್ ಆಗಿ ಕೊಂಬೆಯನ್ನು ಹಿಡಿದು ಅದನ್ನು ಹೆಣಗಾಡುತ್ತಿರುವ ಸ್ನೇಹಿತನನ್ನು ರಕ್ಷಿಸುತ್ತದೆ. ಈ ವಿಡಿಯೋ  ಸ್ನೇಹ ಮತ್ತು ವೀರತ್ವದ ಹೃದಯಸ್ಪರ್ಶಿ ಪ್ರದರ್ಶನವಾಗಿದ್ದು, ವಿಡಿಯೋ ನೆಟ್ಟಿಗರ ಮನಸೋತಿದೆ.

https://twitter.com/i/status/1762758399517757474

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read