ʼಗರ್ಭಿಣಿʼಯರು ಈ ಭಂಗಿಯಲ್ಲಿ ಮಲಗುವುದು ಒಳ್ಳೆಯದಲ್ಲ

ಗರ್ಭ ಧರಿಸಿದ ವೇಳೆ ಮಹಿಳೆ ತನ್ನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಸಹ ಅದು ಕಡಿಮೆಯೇ. ಸ್ವಲ್ಪ ನಿರ್ಲಕ್ಷ್ಯ ತೋರಿದ್ರೂ ಸಹ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಅದರಲ್ಲೂ ಗರ್ಭಿಣಿಯಾಗಿರುವ ಕೊನೆಯ ವಾರಗಳಲ್ಲಿ ತಪ್ಪಾಗಿ ನಿದ್ರೆ ಮಾಡೋದು ತುಂಬಾನೇ ಅಪಾಯಕಾರಿ.

ಮೊದಲ ಮೂರು ತಿಂಗಳಲ್ಲಿ ಗರ್ಭಿಣಿ ಅಂಗಾತ ಮಲಗಿಕೊಳ್ಳಬೇಕು. ಯಾವುದೇ ಒಂದು ಮಗ್ಗುಲಲ್ಲಿ ಮಲಗಿದ್ರೆ ಗರ್ಭಪಾತವಾಗುವ ಅಪಾಯ ಹೆಚ್ಚು ಎನ್ನುತ್ತಾರೆ ವೈದ್ಯರು.

ಇದೇ ರೀತಿ ಹೆರಿಗೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಅಂಗಾತ ಮಲಗಿದ್ರೆ ಮಗುವಿಗೆ ಸರಿಯಾದ ರೀತಿಯಲ್ಲಿ ರಕ್ತಸಂಚಾರವಾಗೋದು ತುಂಬಾನೆ ಕಷ್ಟವಂತೆ. ಈ ರೀತಿ ಅಂಗಾತ ಮಲಗೋದ್ರಿಂದ ಗರ್ಭದ ಗಾತ್ರ ಹೆಚ್ಚಾಗುತ್ತದೆ ಹಾಗೂ ಹೊಕ್ಕುಳ ಬಳ್ಳಿಯ ಗಾತ್ರ ಚಿಕ್ಕದಾಗಲಿದೆ.

ಅಲ್ಲದೇ ಯಾವುದೇ ತರಹದ ಕಾಯಿಲೆಗಳಿಂದ ಬಚಾವಾಗಲು ಗರ್ಭಿಣಿ ವಿವಿಧ ರೀತಿಯ ಯೋಗಾಸನಗಳನ್ನ ಮಾಡೋದು ಒಳ್ಳೆಯದು. ಇದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿ ಇರಲಿದೆ. ಇದರಿಂದ ಟೈಪ್​ 2 ಡಯಾಬಿಟೀಸ್​ ಅಪಾಯ ಕಡಿಮೆ ಆಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read