ಪಿತೃ ಪಕ್ಷದಲ್ಲಿ ಇದು ಕಣ್ಣಿಗೆ ಬಿದ್ದಲ್ಲಿ ಶುಭ ಸಂಕೇತ

ಪಿತೃ ಪಕ್ಷದಲ್ಲಿ, ಪೂರ್ವಜರ ಆತ್ಮಗಳಿಗೆ ಶಾಂತಿ ಕೋರಲು ತರ್ಪಣ, ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರು ಮನೆಗೆ ಬರ್ತಾರೆಂದು ನಂಬಲಾಗಿದೆ. ಪೂರ್ವಜರ ಆಶೀರ್ವಾದ ಸಿಕ್ಕಲ್ಲಿ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗಿದೆ. ಪೂರ್ವಜರ ಅನುಗ್ರಹ ನಿಮ್ಮ ಮೇಲಾಗಿದೆ ಎಂಬುದು ಕೆಲ ಸಂಕೇತಗಳಿಂದ ತಿಳಿಯುತ್ತದೆ.

ಕಾಗೆಗಳಿಗೆ ಇಟ್ಟ ಆಹಾರವನ್ನು ಕಾಗೆಗಳು ಸೇವಿಸಿದರೆ, ಪೂರ್ವಜರು ತೃಪ್ತರಾಗಿದ್ದಾರೆ ಎಂದರ್ಥ. ಇದೇ ಕಾರಣಕ್ಕೆ ನೀವು ಇಟ್ಟ ಆಹಾರವನ್ನು ಅವರು ಸ್ವೀಕರಿಸಿದ್ದಾರೆ ಎನ್ನಲಾಗುತ್ತದೆ.

ಪಿತೃ ಪಕ್ಷದ ಸಮಯದಲ್ಲಿ, ಕಾಗೆಗಳು ಮನೆಯ ಛಾವಣಿಯ ಮೇಲೆ ಬಂದು ಕುಳಿತುಕೊಳ್ಳುವುದು ಪೂರ್ವಜರ ಆಶೀರ್ವಾದ ಎಂದು ಪರಿಗಣಿಸಲಾಗಿದೆ. ಶೀಘ್ರದಲ್ಲೇ ಹಣ ಲಭ್ಯವಾಗಲಿದೆ ಎಂಬ ಸೂಚನೆ.

ಕಾಗೆಯು ಒಣ ಒಣಹುಲ್ಲನ್ನು ತರುವುದನ್ನು ನೋಡಿದರೆ ಅದು ಶುಭ ಸಂಕೇತ. ಅದು ಆರ್ಥಿಕ ಅಭಿವೃದ್ಧಿಯ ಸಂಕೇತ. ಕಾಗೆ ಹೂವುಗಳು ಮತ್ತು ಎಲೆಗಳನ್ನು ತರುವುದ ಕಣ್ಣಿಗೆ ಬಿದ್ದರೆ, ಪೂರ್ವಜರು ನಿಮ್ಮ ಆಸೆ ಈಡೇರಿಸಲಿದ್ದಾರೆ ಎಂಬ ಸೂಚನೆ.

ಧಾನ್ಯಗಳ ರಾಶಿಯ ಮೇಲೆ ಕಾಗೆ ಕುಳಿತಿರುವುದನ್ನು ನೋಡುವುದು ಶುಭ ಸಂಕೇತವಾಗಿದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಹಸು ಮತ್ತು ಕಾಗೆ ಒಟ್ಟಿಗೆ ಕಾಣಿಸಿದ್ರೂ ಅದು ಒಳ್ಳೆಯ ಸೂಚನೆಯಾಗಿದೆ. ಕಾಗೆ ಹಸುವಿನ ಹಿಂಭಾಗದಲ್ಲಿ ಕುಳಿತು ಅದರ ಕೊಕ್ಕಿನಿಂದ ಉಜ್ಜುತ್ತಿರುವುದು ಕಂಡಲ್ಲಿ, ಮನೆಯಲ್ಲಿ ಸಂತೋಷ ಮನೆ ಮಾಡಲಿದೆ ಎಂಬ ಸೂಚನೆ. ಅದೇ ಸಮಯದಲ್ಲಿ, ಕಾಗೆ ಹಂದಿಯ ಮೇಲೆ ಕುಳಿತಿರುವುದು ಕಾಣಿಸಿದ್ರೆ ಶೀಘ್ರದಲ್ಲೇ  ಶ್ರೀಮಂತರಾಗುತ್ತೀರಿ ಎಂದರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read