ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: ISRO ದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: BE/ B.Tech ಪದವೀಧರರಿಗೆ ಅವಕಾಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ವಿಜ್ಞಾನಿ/ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

 ಈ ಕುರಿತು ಇಸ್ರೋ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಅರ್ಜಿ ಲಿಂಕ್ isro.gov.in ನಲ್ಲಿ ಲಭ್ಯವಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 16, 2025.

ವಿವರ

ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್‌ನಂತಹ ವಿವಿಧ ವಿಭಾಗಗಳಲ್ಲಿ ವಿಜ್ಞಾನಿ/ಇಂಜಿನಿಯರ್ ಹುದ್ದೆಗಳಿಗೆ 320 ಹುದ್ದೆಗಳು ಲಭ್ಯವಿದೆ.

ಅರ್ಹತಾ ಮಾನದಂಡಗಳು

ಶೈಕ್ಷಣಿಕ ಅರ್ಹತೆ

ಆಸಕ್ತ ಅರ್ಜಿದಾರರು ಕನಿಷ್ಠ 65% ಅಂಕಗಳೊಂದಿಗೆ ಸಂಬಂಧಿತ ವಿಷಯದಲ್ಲಿ BE/ B.Tech ಪದವಿ ಪಡೆದಿರಬೇಕು.

ISRO-https://www.isro.gov.in/ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕಿದೆ. SBI ಇ-ಪಾವತಿ ಗೇಟ್‌ವೇ(ಇಂಟರ್ನೆಟ್ ಬ್ಯಾಂಕಿಂಗ್, UPI ಮತ್ತು ಡೆಬಿಟ್ ಕಾರ್ಡ್‌ಗಳು) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬಹುದು ಮತ್ತು ಪಾವತಿ ಮಾಡುವ ಲಿಂಕ್ ಆನ್‌ಲೈನ್ ಅರ್ಜಿಯ ಸಲ್ಲಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read