ಹಮಾಸ್ ಉಗ್ರರಿಂದ ಕುಟುಂಬವನ್ನು ರಕ್ಷಿಸಿದ ಮರುಕ್ಷಣವೇ ತಂದೆಗೆ ಬಂದೆರಗಿತ್ತು ಸಾವು; ಹೃದಯವಿದ್ರಾವಕ ವಿಡಿಯೋ ವೈರಲ್

ಇಸ್ರೇಲ್ ನಲ್ಲಿ ಹಮಾಸ್ ಉಗ್ರರು ನಡೆಸ್ತಿರೋ ದಾಳಿಯಲ್ಲಿ ಅವರ ಕ್ರೌರ್ಯದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವುದನ್ನ ತೋರಿಸುತ್ತಿವೆ. ಅಂತಹ ವಿಡಿಯೋವೊಂದರಲ್ಲಿ ತನ್ನ ಕುಟುಂಬವನ್ನು ಉಗ್ರರ ದಾಳಿಯಿಂದ ರಕ್ಷಿಸಲು ತಂದೆಯೊಬ್ಬ ರಿಯಲ್ ಹೀರೋನಂತೆ ಹೋರಾಡಿ ತನ್ನ ಪ್ರಾಣ ತ್ಯಾಗ ಮಾಡಿರುವ ಹೃದಯವಿದ್ರಾವಕ ದೃಶ್ಯ ಕಾಣಿಸಿಕೊಂಡಿದೆ.

ಹಮಾಸ್ ಭಯೋತ್ಪಾದಕರು ತಮ್ಮ ಮನೆಗೆ ಬಲವಂತವಾಗಿ ಪ್ರವೇಶಿಸಿದಾಗ ತಂದೆ ನಿಸ್ವಾರ್ಥವಾಗಿ ತನ್ನ ಪ್ರೀತಿಯ ಕುಟುಂಬದ ಸದಸ್ಯರನ್ನು ಮನೆಯ ಛಾವಣಿಯಲ್ಲಿನ ಪುಟ್ಟ ಕಿಟಕಿಯೊಂದರ ಮೂಲಕ ಹೊರಗೆ ಹೋಗಿ ಪ್ರಾಣ ಉಳಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತಾನೆ. ಈ ಪ್ರಯತ್ನದಲ್ಲಿ ಮನೆಯ ಸದಸ್ಯರು ಕಿಟಕಿಯಿಂದ ಹೊರಬಂದು ಸುರಕ್ಷಿತವಾಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಘಟನೆಯ ಹೃದಯವಿದ್ರಾವಕ ತಿರುವಿನಲ್ಲಿ ತಂದೆ ಸ್ವತಃ ಹೊರಗೆ ಜಿಗಿಯಲು ಮುಂದಾದಾಗ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾನೆ. ಗುಂಡೇಟು ತಿಂದ ಬಳಿಕ ಆತನ ದೇಹ ಕಿಟಕಿಯಿಂದ ಕೆಳಗೆ ಬೀಳುತ್ತದೆ. ವಿಡಿಯೋ ಸೆರೆಯಾಗಿರುವ ಸ್ಥಳದ ವಿವರ ಲಭ್ಯವಿಲ್ಲ, ಆದರೆ ಉಗ್ರರ ದಾಳಿಯ ಭಯಾನಕತೆಯನ್ನ ಈ ವಿಡಿಯೋ ತೋರಿಸುತ್ತದೆ.

ಇಸ್ರೇಲಿ ಪಡೆಗಳು ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷವು ಉಲ್ಬಣಗೊಂಡಿದೆ, ಇದರಿಂದಾಗಿ ಎರಡೂ ಕಡೆಗಳಲ್ಲಿ ನೂರಾರು ಸಾವು ನೋವುಗಳು ಸಂಭವಿಸಿವೆ. ಹಮಾಸ್‌ನ ಭಯೋತ್ಪಾದಕ ದಾಳಿಯಲ್ಲಿ ಸುಮಾರು 600 ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿದೆ.

https://twitter.com/HananyaNaftali/status/1711052553121579138?ref_src=twsrc%5Etfw%7Ctwcamp%5Etweetembed%7Ctwterm%5E1711052553121579138%7Ctwgr%5E9649ec2d403be37b368d8ca60040960e5521d760%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fisraelifatherguideshisfamilytosafetyendsupgettingshotbyhamasterroristsheartbreakingvisualssurface-newsid-n545382456

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read