ಕರಡಿಯು √2 ಸೆಕೆಂಡ್‌ನಲ್ಲಿ 10 ಮೀ ಎತ್ತರದಿಂದ ಬಿದ್ದರೆ ಅದರ ಬಣ್ಣ ಯಾವುದು ? ಲೆಕ್ಕಾಚಾರಕ್ಕೆ ತಲೆಕೆರೆದುಕೊಂಡ ನೆಟ್ಟಿಗರು

ಇಂಟರ್ನೆಟ್ ಮೂಲಕ ನಾವು ಹಲವಾರು ವಿಷಯಗಳನ್ನು ಕಲಿಯಬಹುದು. ಪಠ್ಯಕ್ಕೆ ಸಂಬಂಧಿಸಿದಂತೆಯೂ ಹಲವಾರು ವಿಡಿಯೋಗಳು ಲಭ್ಯ ಇವೆ. ಈಗ ವಿಜ್ಞಾನ, ಗಣಿತ ಮತ್ತು ಇತರ ವಿಷಯಗಳನ್ನು ಕಲಿಸುವ ನಿಖಿಲ್ ಆನಂದ್ ಅವರು ಗಣಿತದ ಸಮೀಕರಣವನ್ನು ಬಳಸಿದ ವೀಡಿಯೊ ಶೇರ್​ ಮಾಡಿದ್ದಾರೆ.

ಸಮೀಕರಣವನ್ನು ಪರಿಹರಿಸಲು ಶಿಕ್ಷಕರು ಬಳಸುವ ವಿಧಾನ ಇದಾಗಿದೆ. “ಕರಡಿಯು √2 ಸೆಕೆಂಡ್‌ನಲ್ಲಿ 10 ಮೀ ಎತ್ತರದಿಂದ ಬೀಳುತ್ತದೆ. ಕರಡಿಯ ಬಣ್ಣ ಏನು? ಎಂಬುದು ಪ್ರಶ್ನೆ. ಇದಕ್ಕೆ ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ.

ಪ್ರಶ್ನೆಗೆ ಉತ್ತರಿಸುವುದು ಅಸಾಧ್ಯವೆಂದು ನಮ್ಮಲ್ಲಿ ಹಲವರು ಹೇಳಿದ್ದಾರೆ. ಆದರೆ ಉತ್ತರ ಸುಲಭ. ಅದೇನೆಂದರೆ, ಲೆಕ್ಕಾಚಾರದ ಗುರುತ್ವಾಕರ್ಷಣೆಯ ಮೌಲ್ಯವು ಭೂಮಿಯ ಧ್ರುವಗಳಲ್ಲಿ ಗುರುತ್ವಾಕರ್ಷಣೆಯ ಬಲಕ್ಕೆ ಸಮಾನವಾಗಿರುತ್ತದೆ, ಆದ್ದರಿಂದ ಕರಡಿ ಹಿಮಕರಡಿಯಾಗಿದೆ. ಪರಿಣಾಮವಾಗಿ, ಕರಡಿ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಈ ಉತ್ತರ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿದ್ದು, ಜನರು ಅಬ್ಬಬ್ಬಾ ಎಂದು ಉದ್ಗರಿಸುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read