BIG BREAKING: ತುಂಗಾ ತೀರದ ಟ್ರಯಲ್ ಬ್ಲಾಸ್ಟ್ ಗೆ ಮೇಜರ್ ಟ್ವಿಸ್ಟ್; ಐಸಿಸ್ ಒಳ ಸಂಚು ಪತ್ತೆ; ಇಬ್ಬರು ಸಕ್ರಿಯ ಸದಸ್ಯರು ಅರೆಸ್ಟ್

ಶಿವಮೊಗ್ಗ ತುಂಗಾ ತೀರದ ಬಾಂಬ್ ಸ್ಪೋಟ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ನಲ್ಲಿ ಐಸಿಸ್ ಒಳಸಂಚು ಇರುವುದು ಪತ್ತೆಯಾಗಿದೆ.

ತುಂಗಾ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಆರು ಸ್ಥಳಗಳಲ್ಲಿ ಎನ್.ಐ.ಎ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ ಸೇರಿದಂತೆ ಆರು ಕಡೆ ದಾಳಿ ನಡೆಸಿದ್ದು, ದಾಳಿಯ ಸಂದರ್ಭದಲ್ಲಿ ಇಬ್ಬರು ಐಸಿಸ್ ಸಕ್ರಿಯ ಸದಸ್ಯರನ್ನು ಬಂಧಿಸಲಾಗಿದೆ.

ಶಿವಮೊಗ್ಗದ ಮಂಜುನಾಥ ಬಡಾವಣೆಯ ಉಜೇರ್ ಫರ್ಹಾನ್ ಬೇಗ್, ಉಡುಪಿಯ ರೇಶಾನ್ ತಾಜುದ್ದೀನ್ ಶೇಕ್ ಎಂಬುವರನ್ನು ಬಂಧಿಸಲಾಗಿದೆ. ಶಂಕಿತ ಉಗ್ರ ಮಾಜ್ ವಿಚಾರಣೆ ಸಂದರ್ಭದಲ್ಲಿ ಇಬ್ಬರ ಹೆಸರನ್ನು ಬಾಯಿಬಿಟ್ಟಿದ್ದ. ಆತನಿಗೆ ರೇಶಾನ್ ತಾಜುದ್ದೀನ್ ಸಹಪಾಠಿಯಾಗಿದ್ದ. ದಾಳಿ ವೇಳೆ ಡಿಜಿಟಲ್ ಡಿವೈಸಸ್ ಮತ್ತು ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಇವರು ಐಸಿಸ್ ಹ್ಯಾಂಡ್ಲರ್ಸ್ ನಿಂದ ಕ್ರಿಫ್ಟೋ ವ್ಯಾಲೆಟ್ ಗೆ ಹಣ ಪಡೆದುಕೊಳ್ಳುತ್ತಿದ್ದರು. ದೊಡ್ಡ ಮಟ್ಟದ ದುಷ್ಕೃತ್ಯ ನಡೆಸುವವರಿಗೆ ಹಣ ಒದಗಿಸುತ್ತಿದ್ದರು. ಲಿಕ್ಕರ್ ಶಾಪ್, ಗೋದಾಮು, ಟ್ರಾನ್ಸ್ ಫಾರ್ಮರ್ ಗೆ ಬೆಂಕಿ ಹಚ್ಚಲು ಸಂಚು ರೂಪಿಸಿದ್ದರು. ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ತರಲು ಸಂಚುರೂಪಿಸಿದ್ದ ಐಸಿಸ್ ಸಂಘಟನೆಯ ಸಕ್ರಿಯ ಸದಸ್ಯರಿಬ್ಬರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read