ಡ್ಯಾರೆನ್ ಜೇಸನ್ ವಾಟ್ಕಿನ್ಸ್ ಜೂನಿಯರ್ ಇವರನ್ನು IShowSpeed ಅಥವಾ ಸರಳವಾಗಿ ಸ್ಪೀಡ್ ಎಂದು ಕರೆಯಲಾಗುತ್ತದೆ. ಇವರು ಅಮೇರಿಕನ್ ಇಂಟರ್ನೆಟ್ ಪ್ರಭಾವಶಾಲಿ ಮತ್ತು ಆನ್‌ಲೈನ್ ಸ್ಟ್ರೀಮರ್ ಆಗಿದ್ದಾರೆ. ತಮ್ಮ ವೈವಿಧ್ಯಮಯ ಲೈವ್‌ಸ್ಟ್ರೀಮ್‌ಗಳಲ್ಲಿನ ನಾಟಕೀಯ ನಡವಳಿಕೆಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಈ ಬಾರಿ ಅವರ ರೋಬೋಟ್ ನಾಯಿಯ ಅಸಮರ್ಪಕ ಕಾರ್ಯದಿಂದ ಸುದ್ದಿಯಾಗಿದ್ದಾರೆ. ಸ್ಪೀಡ್ ತನ್ನ ನಾಯಿಯನ್ನು ಹೇಗೆ ಬೊಗಳುವುದು ಎಂಬುದರ ಕುರಿತು ಲೈವ್‌ಸ್ಟ್ರೀಮ್‌ನಲ್ಲಿ ತರಬೇತಿ ನೀಡುತ್ತಿದ್ದು ಇದನ್ನು ತೋರಿಸುವ ವೀಡಿಯೊ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ರೋಬೋಟ್ ನಾಯಿ ಬೊಗಳುವ ಶಬ್ದವನ್ನು ಅನುಕರಿಸಿದ ತಕ್ಷಣ ಫ್ಲೇಮ್‌ಥ್ರೋವರ್‌ನೊಂದಿಗೆ ಬೆಂಕಿಯ ಜ್ವಾಲೆಗಳನ್ನು ಸ್ಪೀಡ್ ಕಡೆ ಹಾರಿಸುತ್ತದೆ. ಒಂದು ಸೆಕೆಂಡಿನಲ್ಲಿ ಸ್ಪೀಡ್ ತನ್ನನ್ನು ಉಳಿಸಿಕೊಳ್ಳಲು ಪಕ್ಕದಲ್ಲಿದ್ದ ಈಜುಕೊಳಕ್ಕೆ ಹಾರುತ್ತಾನೆ. ರೋಬೋಟ್ ಶ್ವಾನವು ಅವನನ್ನು ಗುರಿಯಾಗಿಸಿಕೊಂಡು ಹಲವು ಬಾರಿ ಜ್ವಾಲೆ ಉಗುಳುತ್ತದೆ.
https://twitter.com/SpeedUpdates1/status/1830690784745869662?ref_src=twsrc%5Etfw%7Ctwcamp%5Etweetembed%7Ctwterm%5E1830690784745869662%7Ctwgr%5E8b971e90e05470f6bf789c5752b1fd3cbfceeade%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fishowspeedgetslitonfireafterhisrobotdogshotflamesathimmultipletimesduringlivestreamyoutuberjumpsintothepooltoescapewatchviralvideos-newsid-n629275547
https://twitter.com/ClownWorld_/status/1830704336923729949?ref_src=twsrc%5Etfw%7Ctwcamp%5Etweetembed%7Ctwterm%5E1830704336923729949%7Ctwgr%5E8b971e90e05470f6bf789c5752b1fd3cbfceeade%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fishowspeedgetslitonfireafterhisrobotdogshotflamesathimmultipletimesduringlivestreamyoutuberjumpsintothepooltoescapewatchviralvideos-newsid-n629275547