ನಿಮ್ಮ ವಾಶ್ ಬೇಸಿನ್ ಪೈಪ್ ಕಟ್ಟಿಕೊಂಡಿದೆಯೇ ? ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ !

ನಿಮ್ಮ ಮನೆಯ ಬಾತ್ರೂಮ್ ಅಥವಾ ಕೈತೊಳೆಯುವ ಜಾಗದ ವಾಶ್ ಬೇಸಿನ್ ಪೈಪ್ ಪದೇ ಪದೇ ಬಂದ್ ಆಗುತ್ತಿದೆಯೇ? ಅದರಿಂದ ದುರ್ವಾಸನೆ ಬರುತ್ತಿದೆಯೇ? ದುಬಾರಿ ರಾಸಾಯನಿಕ ಪುಡಿಗಳನ್ನು ಬಳಸಿ ಸಾಕಾಗಿದೆಯೇ? ಹಾಗಾದ್ರೆ ನಿಮಗೊಂದು ಸಿಂಪಲ್ ಹಾಗೂ ಅಗ್ಗದ ಮನೆಮದ್ದು ಇಲ್ಲಿದೆ. ಕೇವಲ ₹10 ಖರ್ಚು ಮಾಡಿ ನಿಮ್ಮ ಸಮಸ್ಯೆಗೆ ನೀವು ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು!

ಸಾಮಾನ್ಯವಾಗಿ ವಾಶ್ ಬೇಸಿನ್ ಪೈಪ್‌ಗಳಲ್ಲಿ ಆಹಾರದ ಕಣಗಳು, ಕೂದಲು ಅಥವಾ ಇನ್ನಿತರ ಕೊಳೆ ಸಿಲುಕಿಕೊಂಡು ನೀರು ಸರಾಗವಾಗಿ ಹೋಗಲು ತೊಂದರೆಯಾಗುತ್ತದೆ. ಇದರಿಂದ ಸೊಳ್ಳೆಗಳು ಮತ್ತು ಇತರ ಕೀಟಗಳು ಉತ್ಪತ್ತಿಯಾಗುವ ಸಾಧ್ಯತೆಯೂ ಇದೆ. ಮಾರುಕಟ್ಟೆಯಲ್ಲಿ ಸಿಗುವ ಕ್ಲೀನರ್‌ಗಳು ದುಬಾರಿಯಾಗಿರಬಹುದು. ಹೀಗಾಗಿ, ನಾವು ನಿಮಗೆ ಅಡುಗೆ ಮನೆಯಲ್ಲಿ ಸಿಗುವ ಕೆಲವೇ ವಸ್ತುಗಳನ್ನು ಬಳಸಿ ಪೈಪ್ ಕ್ಲೀನ್ ಮಾಡುವ ವಿಧಾನವನ್ನು ತಿಳಿಸಲಿದ್ದೇವೆ.

ಮೊದಲಿಗೆ ನೀವು ಮಾರುಕಟ್ಟೆಯಿಂದ ₹10 ರೂಪಾಯಿಯ ಲಿಕ್ವಿಡ್ ಸೋಡಾವನ್ನು ತರಬೇಕು. ಅದನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ. ನಂತರ ತಕ್ಷಣವೇ ಅದಕ್ಕೆ ಒಂದು ಚಮಚ ಬಿಳಿ ಉಪ್ಪು ಅಥವಾ ಕಲ್ಲು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಕಿ. ಈ ದ್ರಾವಣವನ್ನು ತಕ್ಷಣವೇ ವಾಶ್ ಬೇಸಿನ್‌ನ ಪೈಪ್‌ಗೆ ಸುರಿಯಿರಿ. ಹೀಗೆ ಮಾಡುವುದರಿಂದ ಪೈಪ್‌ನಲ್ಲಿರುವ ಎಲ್ಲಾ ಕೊಳೆ ಹೊರಬರುತ್ತದೆ.

ಇದಲ್ಲದೆ, ನೀವು ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಅಡುಗೆ ಸೋಡಾವನ್ನು ಸೇರಿಸಬಹುದು. ಈ ಬಿಸಿ ನೀರನ್ನು ವಾಶ್ ಬೇಸಿನ್‌ನ ಪೈಪ್‌ಗೆ ಸುರಿದರೆ ದುರ್ವಾಸನೆ ಮತ್ತು ಕೊಳೆ ಎರಡೂ ಮಾಯವಾಗುತ್ತದೆ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿದರೆ ಪೈಪ್ ಯಾವಾಗಲೂ ಸ್ವಚ್ಛವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read