ಕುತ್ತಿಗೆ ಕಪ್ಪಾಗಿದೆಯಾ…..? ಈ ಮನೆಮದ್ದುಗಳಲ್ಲಿದೆ ಸುಲಭ ಪರಿಹಾರ

ಬೇಸಿಗೆಯಲ್ಲಿ ಚರ್ಮ ಕಪ್ಪಾಗುವುದು ಸಾಮಾನ್ಯ. ಕುತ್ತಿಗೆಯ ಭಾಗ ಬಹುಬೇಗ ಕಂದು ಬಣ್ಣಕ್ಕೆ ತಿರುಗುತ್ತದೆ. ಕತ್ತು ಕಪ್ಪಗಾಗಿ ಮುಖ, ಮೈಯೆಲ್ಲಾ ಬೆಳ್ಳಗಿದ್ದರೆ ತುಂಬಾ ವಿಚಿತ್ರವಾಗಿ ಕಾಣಿಸುತ್ತದೆ. ಕುತ್ತಿಗೆಯ ಕಪ್ಪನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳಿವೆ. ಇದನ್ನು ಅನುಸರಿಸಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ಕುತ್ತಿಗೆ ಮೊದಲಿನ ಬಣ್ಣಕ್ಕೆ ತಿರುಗುತ್ತದೆ.

ಹರಳೆಣ್ಣೆ: ಒಂದು ಚಮಚ ಹರಳೆಣ್ಣೆಗೆ ಅಷ್ಟೇ ಪ್ರಮಾಣದಲ್ಲಿ ಮುಲ್ತಾನಿ ಮಿಟ್ಟಿಯನ್ನು ಬೆರೆಸಬೇಕು. 1 ಚಮಚ ರೋಸ್ ವಾಟರ್ ಮತ್ತು 1-2 ಚಮಚ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಚೆನ್ನಾಗಿ ಅನ್ವಯಿಸಿ. ಅದನ್ನು 15-20 ನಿಮಿಷಗಳ ಕಾಲ ಬಿಡಿ, ಚೆನ್ನಾಗಿ ಒಣಗಿದ ಬಳಿಕ ಶುದ್ಧ ನೀರಿನಿಂದ ತೊಳೆಯಿರಿ. ಸೋಪ್‌ ಅನ್ನು ಬಳಸಬೇಡಿ. ವಾರಕ್ಕೆ 3-4 ಬಾರಿ ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕತ್ತು ಬೆಳ್ಳಗಾಗುತ್ತದೆ. ಉತ್ತಮ ಫಲಿತಾಂಶಗಳಿಗಾಗಿ ಮಲಗುವ ಮುನ್ನ ಇದನ್ನು ಬಳಸಿ.

ಅಡುಗೆ ಸೋಡಾ ಮತ್ತು ರೋಸ್‌ ವಾಟರ್‌: ಅಡುಗೆ ಸೋಡಾ ಮತ್ತು ರೋಸ್ ವಾಟರ್ ಅನ್ನು ಸಹ ಬಳಸಬಹುದು. ಒಂದು ಚಮಚ ಹರಳೆಣ್ಣೆಗೆ ಅದೇ ಪ್ರಮಾಣದಲ್ಲಿ ಅಡುಗೆ ಸೋಡಾ ಮತ್ತು ರೋಸ್ ವಾಟರ್ ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಕಪ್ಪಾಗಿರುವ ಕುತ್ತಿಗೆಗೆ ಹಚ್ಚಿಕೊಳ್ಳಿ. 15-20 ನಿಮಿಷ ಹಾಗೇ ಬಿಡಿ, ನಂತರ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಕತ್ತಿನ ಕಪ್ಪು ಬಣ್ಣವನ್ನು ಹೋಗಲಾಡಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read