ಹೆಲ್ಮೆಟ್ ಧರಿಸಿ ಕೂದಲು ಉದುರುತ್ತಿದೆಯೇ…? ಹಾಗಾದ್ರೆ ಇದನ್ನೋದಿ

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವುದ್ನು ನೀವು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ?

ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ ಹೆಲ್ಮೆಟ್ ಧರಿಸದವರೂ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ. ನೀವು ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ನಿಮ್ಮ ಕೂದಲಿನ ರಕ್ಷಣೆ ಮಾಡಬಹುದು.

ಹೆಲ್ಮೆಟ್ ಧರಿಸುವ ಮುನ್ನ ಕೂದಲನ್ನು ಗಂಟು ಹಾಕಿಕೊಳ್ಳಿ. ಕೂದಲು ಹಾರಾಡಿದಷ್ಟು ಧೂಳು, ಕೊಳೆ ಸೇರಿಕೊಂಡು ಕೂದಲಿನ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ.

ನಿತ್ಯ ಹೆಲ್ಮೆಟ್ ಬಳಸುವವರಾದರೆ ಎರಡು ದಿನಕ್ಕೊಮ್ಮೆ ತಲೆ ಸ್ನಾನ ಮಾಡಲು ಮರೆಯದಿರಿ. ಹೆಲ್ಮೆಟ್ ಒಳಗೆ ಬೆವರಿ ತಲೆಯಲ್ಲಿ ಕೊಳೆ ಕೂತು ಕೂದಲಿನ ಕಿರು ಚೀಲಗಳ ಬಳಿ ಇಳಿದು ನಿಮ್ಮ ಕೂದಲನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ಉತ್ತಮ ಶಾಂಪೂವಿನಿಂದ ಎರಡು ದಿನಕ್ಕೊಮ್ಮೆ ಸ್ನಾನ ಮಾಡುವುದು ಬಹಳ ಒಳ್ಳೆಯದು.

ನಿಮ್ಮ ತಲೆಗೆ ಹೊಂದುವಂತ ಹೆಲ್ಮೆಟ್ ಬಳಸಿ. ಆಕರ್ಷಕ ಎಂಬ ಕಾರಣಕ್ಕೆ ಆರಾಮ ನೀಡದ ಹೆಲ್ಮೆಟ್ ಬಳಸದಿರಿ. ತೆಂಗಿನೆಣ್ಣೆ, ಜೇನುತುಪ್ಪ, ಅಲೋವೇರಾ ಸೇರಿಸಿ ತಲೆಗೆ ಹಚ್ಚಿಕೊಳ್ಳಿ ಇದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read