ಬಿಳಿ ಕೂದಲು ಸಮಸ್ಯೆಯಾ…..? ನಿವಾರಿಸಲು ಹೀಗೆ ಮಾಡಿ

ಹಿಂದೂ ಪೂಜಾ ವಿಧಾನದ ಪ್ರಕಾರ ಬಾಳೆ ಎಲೆಗೆ ಮಹತ್ವದ ಸ್ಥಾನವಿದೆ. ಬಾಳೆ ಎಲೆ ಇಲ್ಲದೆ ಸತ್ಯನಾರಾಯಣನ ಪೂಜೆ ನಡೆಯೋದಿಲ್ಲ. ಬಾಳೆ ಎಲೆಗೆ ಎಷ್ಟು ಧಾರ್ಮಿಕ ಮಹತ್ವವಿದೆಯೋ ಅಷ್ಟೇ ಆಯುರ್ವೇದದಲ್ಲಿಯೂ ಮಹತ್ವ ಪಡೆದಿದೆ. ಸರ್ವರೋಗ ನಿವಾರಕ ಶಕ್ತಿ ಬಾಳೆ ಎಲೆಗಿದೆ.

ಬಾಳೆ ಎಲೆಯಲ್ಲಿ ಆಹಾರ ಸೇವನೆ ಮಾಡುವ ಪದ್ಧತಿ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಕರ್ನಾಟಕ, ಕೇರಳದಲ್ಲಿ ಈಗಲೂ ಮದುವೆ ಸೇರಿದಂತೆ ಧಾರ್ಮಿಕ ಸಮಾರಂಭಗಳಲ್ಲಿ ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಗುತ್ತದೆ.

ಬಾಳೆ ಎಲೆಯಲ್ಲಿ ಪ್ರತಿದಿನ ಊಟ ಮಾಡುವುದರಿಂದ ಬೆಳ್ಳಗಾಗಿರುವ ಕೂದಲು ಹೊಳಪು ಪಡೆದು ಕಪ್ಪುಬಣ್ಣಕ್ಕೆ ತಿರುಗುತ್ತದೆ.

ಬಾಳೆ ಎಲೆಗೆ ಬಿಸಿ ಆಹಾರ ಹಾಕುವುದರಿಂದ ಬಾಳೆ ಎಲೆಯಲ್ಲಿರುವ ಪೌಷ್ಠಿಕ ತತ್ವ ಆಹಾರದ ಜೊತೆ ಬೆರೆತು ಆರೋಗ್ಯ ವೃದ್ಧಿಯಾಗುತ್ತದೆ.

ಸಸ್ಯಹಾರಿ ಆಹಾರವನ್ನು ಬಾಳೆ ಎಲೆಯಲ್ಲಿ ಸುತ್ತಿ ತುಂಬಾ ಸಮಯದವರೆಗೆ ತಾಜಾ ಇಡಬಹುದು.

ಚರ್ಮಕ್ಕೆ ಸಂಬಂಧಿಸಿದ ರೋಗಗಳಿಗೆ ಬಾಳೆ ಎಲೆ ರಾಮಬಾಣ. ಬಾಳೆ ಎಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಹಚ್ಚುವುದರಿಂದ  ಚರ್ಮ ರೋಗ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read