ದೇಹದಲ್ಲಿ ಉಷ್ಣತೆ ಹೆಚ್ಚಿದೆಯಾ……? ಹೀಗೆ ಮಾಡಿ

ದೇಹದಲ್ಲಿ ಉಷ್ಣ ಹೆಚ್ಚಿದಾಗ ಅದು ಹಲವು ರೂಪದಲ್ಲಿ ದೇಹದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮುಖದ ಮೇಲೆ ಮೊಡವೆಗಳು ಮೂಡುವ ಮೂಲಕ, ಮಲಬದ್ಧತೆಯ ಮೂಲಕ ಕಾಣಿಸಿಕೊಳ್ಳಬಹುದು. ಕೆಲವು ಮನೆ ಮದ್ದುಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಗಸೆಗಸೆ ಬೀಜದಲ್ಲಿ ಇದಕ್ಕೆ ಮದ್ದಿದೆ. ಮೊದಲು ಗಸೆಗಸೆ ಬೀಜವನ್ನು ಹುರಿಯಿರಿ. ಇದಕ್ಕೆ ತುರಿದ ಕೊಬ್ಬರಿ ಬೆರೆಸಿ ನೆನೆಯುವಷ್ಟು ನೀರು ಹಾಕಿ ಮುಚ್ಚಿ ಪಕ್ಕಕ್ಕಿಡಿ. ಚೆನ್ನಾಗಿ ನೆನೆದ ಬಳಿಕ ಇವೆರಡನ್ನು ಸರಿಯಾಗಿ ರುಬ್ಬಿ. ಇದನ್ನು ಸ್ಟೌವ್ ಮೇಲಿಟ್ಟು ಬೆಲ್ಲ ಹಾಗೂ ಚಿಟಿಕೆ ಉಪ್ಪು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಿ ನಂತರ ಕುಡಿಯಿರಿ.

ಗಸೆಗಸೆಯಲ್ಲಿರುವ ಕಬ್ಬಿಣ, ಜಿಂಕ್ ಮೊದಲಾದ ಖನಿಜಾಂಶಗಳು ಅಜೀರ್ಣದಂಥ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ ಮಾತ್ರವಲ್ಲ ದೇಹವನ್ನು ತಂಪಾಗಿಡುತ್ತದೆ. ಹೇರಳವಾದ ನಾರಿನಂಶ ಹೊಂದಿರುವ ಇದು ಮಲಬದ್ಧತೆ ಸಮಸ್ಯೆಗೆ ಮುಕ್ತಿ ನೀಡಿ ಹೃದಯದ ರಕ್ತ ಪರಿಚಲನೆಗೆ ವೇಗ ನೀಡುತ್ತದೆ.

ಬೆಲ್ಲದಲ್ಲೂ ಹಲವು ಔಷಧೀಯ ಗುಣಗಳಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ. ಮುಖದ ಮೇಲೆ ಮೂಡುವ ಮೊಡವೆಗಳ ನಿವಾರಣೆಗೂ ಇದು ಸಹಕಾರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read