ಮೊಡವೆ ಕಲೆಯಿಂದಾಗಿ ಮುಖದ ಸೌಂದರ್ಯ ಕುಂದಿದೆಯಾ…..? ಇಲ್ಲಿದೆ ʼಮನೆ ಮದ್ದುʼ

ಮಹಿಳೆಯರಲ್ಲಿ ಒಮ್ಮೆ ಮೊಡವೆ ಸಮಸ್ಯೆ ಶುರುವಾಯ್ತು ಅಂದರೆ ಸಾಕು ಅದು ಸುಲಭವಾಗಿ ಬೆನ್ನು ಬಿಡೋದಿಲ್ಲ. ಈ ಮೊಡವೆ ಸಮಸ್ಯೆಯಿಂದ ಪಾರಾಗೋಣ ಎಂದು ಮಹಿಳೆಯರು ಸಾವಿರಾರು ರೂಪಾಯಿ ಹಣವನ್ನ ಖಾಲಿ ಮಾಡೋದು ಉಂಟು. ಅನೇಕ ಬಾರಿ ಮೊಡವೆ ಕಡಿಮೆ ಆದರೂ ಸಹ ಅದು ಮುಖದ ಮೇಲೆ ಉಳಿಸಿ ಹೋಗುವ ಕಲೆ ಹೆಣ್ಣು ಮಕ್ಕಳ ಸೌಂದರ್ಯವನ್ನ ಹಾಳುಗೆಡವುತ್ತದೆ. ಆದರೆ ಈ ಸಮಸ್ಯೆಗೆ ನೀವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮನೆಯಲ್ಲೇ ಇರುವ ವಸ್ತುವನ್ನ ಬಳಸಿ ಮೊಡವೆ ಕಲೆಗಳಿಗೆ ಶಾಶ್ವತವಾಗಿ ಗುಡ್​ ಬೈ ಹೇಳಬಹುದಾಗಿದೆ.

ಒಂದು ಪಾತ್ರೆಯಲ್ಲಿ ಬಾದಾಮಿ ಹಾಲು ತೆಗೆದುಕೊಳ್ಳಿ. ಇದಕ್ಕೆ ಮೊಟ್ಟೆಯ ಬಿಳಿ ಭಾಗವನ್ನ ಹಾಕಿ. ಬಳಿಕ ನಿಂಬು ರಸವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಫೇಸ್​ ಮಾಸ್ಕ್​ನ್ನು ವಾರದಲ್ಲಿ ಎರಡು ಬಾರಿ ಮುಖಕ್ಕೆ ಹಚ್ಚಿಕೊಳ್ಳಿ. 10 -15 ನಿಮಿಷ ಬಿಟ್ಟು ನೀರಿನಲ್ಲಿ ಮುಖವನ್ನ ತೊಳೆದುಕೊಳ್ಳಿ. ಈ ರೀತಿ ಮಾಡೋದ್ರಿಂದ ಮೊಡವೆ ಕಲೆಗಳು ಕ್ರಮೇಣವಾಗಿ ಮಾಯವಾಗಲಿದೆ.

 ಚರ್ಮ ಸಂಬಂಧಿ ಎಲ್ಲಾ ಸಮಸ್ಯೆಗಳಿಗೆ ಆಲೋವೇರಾ ರಾಮಬಾಣ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಹೀಗಾಗಿ ಆಲೋವೇರಾ ಜೆಲ್​ಗೆ ನಿಂಬು ರಸವನ್ನ ಮಿಶ್ರಣ ಮಾಡಿ. ಮೊಡವೆ ಕಲೆ ಇರುವ ಜಾಗದಲ್ಲಿ ಈ ಮಿಶ್ರಣವನ್ನ ಹಚ್ಚಿಕೊಂಡು 10 ರಿಂದ 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ. ಈ ರೀತಿ ಮಾಡುವ ಮೂಲಕವೂ ನೀವು ಮೊಡವೆ ಕಲೆಯಿಂದ ಪಾರಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read