ನೀವು ಕೊಳ್ಳುವ ಬನಾರಸ್ ಸೀರೆ ಅಸಲಿಯೋ ? ನಕಲಿಯೋ ? ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್

ಮೊಘಲರ ಕಾಲದಿಂದಲೂ ಅಸ್ತಿತ್ವದಲ್ಲಿರುವ ವಿಶ್ವ ಪ್ರಸಿದ್ಧ ಬನಾರಸ್ ಸೀರೆ ಅಂದರೆ ಪ್ರತಿ ಹೆಣ್ಮಕ್ಕಳು ಆಸೆ ಕಂಗಳಿಂದಲೇ ನೋಡುತ್ತಾರೆ. ಮೊದಲೆಲ್ಲಾ ಬನಾರಸ್​ ಸೀರೆಗಳು ಕೊಂಚ ದುಬಾರಿಯಾಗಿದ್ದವು. ಆದರೆ ಈಗ ಕೈಗೆಟುಕುವ ದರದಲ್ಲಿ ಚೀನಾ ತಯಾರಿಸಿದ ಬನಾರಸ್​​ ಸೀರೆಗಳು ಸಿಗುತ್ತಿವೆ. ‌

ನಿಜ ಹೇಳಬೇಕು ಅಂದ್ರೆ ಅವು ಬನಾರಸ್ ಸೀರೆಗಳೇ ? ಅದರ ರೆಪ್ಲಿಕಾಗಳೇ ಎಂದು ತಿಳಿಯುವುದೇ ಇಲ್ಲ. ಅಷ್ಟರ ಮಟ್ಟಿಗೆ ಗ್ರಾಹಕರನ್ನು ಸೆಳೆದುಬಿಡುತ್ತವೆ. ಹಾಗಾದರೆ ನಿಜವಾದ ಬನಾರಸ್​ ಸೀರೆಗಳನ್ನು ಪತ್ತೆ ಹಚ್ಚುವುದು ಹೇಗೆ ಅನ್ನೋ ಗೊಂದಲಕ್ಕೆ ಇಲ್ಲಿದೆ ಉತ್ತರ.

1. ಬೆಲೆ : ನಿಜವಾದ ಬನಾರಸ್ ಸೀರೆಯ ಬೆಲೆ 8000 ರೂ.ಗಳಿಂದ ಆರಂಭವಾಗಿ 3 ಲಕ್ಷ ರೂಪಾಯಿವರೆಗೆ ಇದೆ. ಆದರೆ ಬನಾರಸ್ ಸೀರೆಗಳಂತೆ ಕಾಣುವ ನಕಲಿ ಬನಾರಸ್ ಸೀರೆಗಳು 2500 ರೂ. ನಿಂದ 4000 ರೂ. ಗಳಿಗೆ ಸಿಗುತ್ತದೆ. ಸಮೀಕ್ಷೆ ಪ್ರಕಾರ ಈ ನಕಲಿಗಳಿಂದ ಶೇಕಡಾ 60 ರಷ್ಟು ಬನಾರಸ್ ಸೀರೆ​ ನೇಕಾರರು ತೊಂದರೆ ಅನುಭವಿಸಿದ್ದಾರೆ.

2. ಮೊಘಲ್ ಡಿಸೈನ್​ಗಳು : ನೀವು ಈ ಮುಂಚೆ ನಿಜವಾದ ಬನಾರಸಿ ಸೀರೆಗಳನ್ನು ನೋಡಿದ್ದರೆ ನಕಲಿಯನ್ನು ಸುಲಭವಾಗಿ ಗುರುತಿಸಬಹುದು. ಅಮೂರ್, ಅಂಬಿ ಮತ್ತು ಡೋಮಕ್ ಪರ್ಶಿಯನ್​ ಶೈಲಿ ಇರುವುದು ನಿಜವಾದ ಬನಾರಸ್ ಸೀರೆಯಾಗಿದೆ.

 3. ಸಿಲ್ಕ್ ಮಾರ್ಕ್ ಲೋಗೋ : ಬನಾರಸ್ ಅಥವಾ ಇನ್ನಾವುದೇ ಪರಿಶುದ್ಧ ರೇಷ್ಮೆ ಸೀರೆಗಳನ್ನು ಕೊಳ್ಳುವ ಮುನ್ನ ಮುಖ್ಯವಾದ ಅಂಶವೊಂದನ್ನು ಗಮನದಲ್ಲಿಡಬೇಕು. ಸಿಲ್ಕ್ ಮಾರ್ಕ್​​ ಲೋಗೋದ ಅಧಿಕೃತ ಬಳಕೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ಇಲ್ಲದಿದ್ದರೆ ಆ ಸೀರೆಗಳನ್ನು ಕೊಳ್ಳಲೇಬೇಡಿ.

ಅಸಲಿಗಿಂತ ನಕಲಿಯೇ ಹೆಚ್ಚು ಆಕರ್ಷಣೆ ಇರುವ ಕಾಲಘಟ್ಟದಲ್ಲಿ ನಿಜದ ಮಾನದಂಡಗಳನ್ನು ತಿಳಿದುಕೊಳ್ಳಬೇಕು. ಆಗ ಉತ್ಕೃಷ್ಟ ಗುಣಮಟ್ಟದ ಸೀರೆಗಳು ನಿಮ್ಮದಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read