ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದಾ…..? ಇಲ್ಲಿದೆ ವಿವರ

ಚಳಿಗಾಲದಲ್ಲಿ ಎಲ್ಲವೂ ಬೆಚ್ಚಗಿರಬೇಕು. ಬಿಸಿ ಬಿಸಿ ಟೀ, ಬಿಸಿ ಬಿಸಿ ಆಹಾರ, ಬಿಸಿ ನೀರು ಸೇವನೆಗೆ ಎಲ್ಲರೂ ಆದ್ಯತೆ ನೀಡ್ತಾರೆ. ಹಾಗೆಯೇ ಬಿಸಿ ನೀರಿನ ಸ್ನಾನ ಇಷ್ಟಪಡ್ತಾರೆ. ತಣ್ಣನೆ ವಸ್ತುವನ್ನು ಮುಟ್ಟಲೂ ಅನೇಕರಿಗೆ ಮನಸ್ಸಾಗುವುದಿಲ್ಲ. ಇನ್ನು ತಣ್ಣೀರಿನ ಸ್ನಾನ ಕನಸು. ಆದ್ರೆ  ಚಳಿಗಾಲದಲ್ಲಿ ಬಿಸಿ ನೀರಿಗಿಂತ ತಣ್ಣನೆ ನೀರಿನ ಸ್ನಾನ ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಹೇಳ್ತಾರೆ.

ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ತ್ವಚೆಯಲ್ಲಿ ಹೊಳಪು ಬರುತ್ತದೆ. ಶುಷ್ಕತೆಯ ಸಮಸ್ಯೆ ನಿವಾರಣೆಯಾಗುತ್ತದೆ.

ತಣ್ಣೀರಿನ ಸ್ನಾನ ಕೂದಲಿಗೂ ಒಳ್ಳೆಯದು. ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಕೂದಲು ಹೊಳಪು ಪಡೆಯುತ್ತದೆ. ಜೊತೆಗೆ ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಸ್ನಾಯು ನೋವೂ ದೂರವಾಗುತ್ತದೆ.

ಆದ್ರೆ ಚಳಿಗಾಲದಲ್ಲಿ ತಣ್ಣೀರಿನ ಸ್ನಾನದಿಂದ ಕೆಲ ಅನಾನುಕೂಲವೂ ಇದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ತಣ್ಣೀರಿನಿಂದ ಸ್ನಾನ ಮಾಡಬಾರದು. ಜ್ವರ ಅಥವಾ ಸೋಂಕಿದ್ರೂ ಇದ್ರಿಂದ ದೂರವಿರುವುದು ಒಳ್ಳೆಯದು. ಚಳಿಗಾಲದಲ್ಲಿ ಅಲರ್ಜಿ ಸಮಸ್ಯೆ ಎದುರಿಸುವವರು ತಣ್ಣೀರು ಸ್ನಾನ ಮಾಡಬಾರದು. ಹಾಗೆ ಮೈ ಬಿಸಿ ಮಾಡಿಕೊಳ್ಳಲು ಬಿಸಿಲಿನ ಮುಂದೆ ಕುಳಿತಿದ್ದು, ತಕ್ಷಣ ಬಂದು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದಲ್ಲ. ನಿಮ್ಮ ಆರೋಗ್ಯವನ್ನು ನೋಡಿಕೊಂಡು ನೀವು ತಣ್ಣನೆಯ ನೀರು ಹಾಗೂ ಬಿಸಿ ನೀರಿನ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read