ಪ್ರಧಾನಿ ಮೋದಿಗೆ ‘ಪರ್ಯಾಯ’ ನಾಯಕರಾಗುವ ಮಟ್ಟದಲ್ಲಿ ಬೆಳೆದಿದ್ದಾರಾ ರಾಹುಲ್ ? ಕುತೂಹಲಕಾರಿ ಉತ್ತರ ನೀಡಿದ ‘ಚುನಾವಣಾ ಚಾಣಕ್ಯ’ ಪ್ರಶಾಂತ್ ಕಿಶೋರ್

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪುನರುಜ್ಜೀವನಕ್ಕೆ ರಾಹುಲ್ ಗಾಂಧಿಯವರ ನಾಯಕತ್ವ ಕಾರಣ ಎಂದು ಚುನಾವಣಾ ಚತುರ ಎಂದೇ ಹೆಸರುಗಳಿಸಿರುವ ಪ್ರಶಾಂತ್ ಕಿಶೋರ್ ಪ್ರಶಂಶಿಸಿದ್ದಾರೆ. ಆದರೆ ರಾಷ್ರ್ಗನಾಯಕ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಹುಲ್ ಗಾಂಧಿ ಸದ್ಯಕ್ಕೆ ಪರ್ಯಾಯ ನಾಯಕರಲ್ಲ, ಈ ಸ್ಥಾನಕ್ಕೇರಲು ಅವರು ಇನ್ನೂ ಹೆಚ್ಚು ದೂರ ಸಾಗಬೇಕಾಗಿದೆ ಎಂದಿದ್ದಾರೆ.

ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್, ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಿದ ಕೀರ್ತಿಗೆ ರಾಹುಲ್ ಅರ್ಹರು. ಯಾವುದೇ ಪಕ್ಷ ಪುನರುಜ್ಜೀವನ ಕಂಡಾಗ ಅದರ ನಾಯಕನಿಗೆ ಅದರ ಶ್ರೇಯಸ್ಸು ಸಿಗಬೇಕು. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದು, ಪಕ್ಷದ ಸಾಧನೆಯ ಶ್ರೇಯಸ್ಸು ಅವರಿಗೆ ಸಲ್ಲಬೇಕು ಎಂದರು.

ಆದಾಗ್ಯೂ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ನಾಯಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಇನ್ನೂ ಬಹಳ ಶ್ರಮಿಸಬೇಕಿದೆ ಎಂದು ಹೇಳಿದರು.

“ಒಂದು ದೃಷ್ಟಿಕೋನದಲ್ಲಿ ಹೇಳುವುದಾದರೆ, ಮಾಜಿ ಪ್ರಧಾನಿ ಇಂದಿರಾಗಾಂಧಿ 1977 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತಾಗ ಕಾಂಗ್ರೆಸ್ 154 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ . ಇದು ನಾಯಕನಾಗಿ ರಾಹುಲ್ ಗಾಂಧಿ ಮೈಲಿಗಲ್ಲನ್ನು ತೋರಿಸುತ್ತದೆ. ಈ ಮೂಲಕ ಅವರು ನಾಯಕರಾಗಿ ಹೊರಹೊಮ್ಮಿದರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರ್ಯಾಯ ರಾಷ್ರೀಗಿಯ ನಾಯಕರಾಗಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂಬುದನ್ನು ನಾವು ತಿಳಿದಿದ್ದೇವೆ ”ಎಂದು ಅವರು ಹೇಳಿದರು.

“ರಾಹುಲ್ ಅವರು ಖಂಡಿತವಾಗಿಯೂ ಕಾಂಗ್ರೆಸ್ ನಾಯಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ ಮತ್ತು ಮುಂದಿನ 5 ಅಥವಾ 10 ವರ್ಷಗಳಲ್ಲಿ ಪಕ್ಷದೊಳಗೆ ಯಾವುದೇ ಸವಾಲು ಎದುರಾಗುವ ಸಾಧ್ಯತೆಯಿಲ್ಲ. ಆದರೆ ದೇಶದ ನಾಯಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಅವರು ಬಹಳ ದೂರ ಹೋಗಬೇಕಾಗಿದೆ. 99 ಸ್ಥಾನಗಳನ್ನು ಗೆಲ್ಲುವುದು ಒಂದು ವಿಷಯವಾದರೆ, 250 ರಿಂದ 260 ಸ್ಥಾನಗಳನ್ನು ಗೆಲ್ಲುವುದು ಮತ್ತೊಂದು ವಿಚಾರ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಒಗ್ಗಟ್ಟಿನ ಘಟಕವಾಗಿ ಒಟ್ಟಾಗಿ ಕೆಲಸ ಮಾಡುತ್ತಿರುವ ವಿರೋಧ ಪಕ್ಷಗಳನ್ನು ಶ್ಲಾಘಿಸಿದ ಪ್ರಶಾಂತ್ ಕಿಶೋರ್ ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಎಂದು ಹೇಳಿದರು.

ಕಾಂಗ್ರೆಸ್ ಅನ್ನು ಒಳಗೊಂಡಿರುವ ವಿರೋಧ ಪಕ್ಷವಾದ ಇಂಡಿ ಮೈತ್ರಿಕೂಟ ಸಮೀಕ್ಷೆಗಾರರ ನಿರೀಕ್ಷೆಗಳನ್ನು ಹುಸಿಗೊಳಿಸಿ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದಂತಹ ಉತ್ತಮ ಪ್ರದರ್ಶನವನ್ನು ನೀಡಿತು ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read