ಪನೀರ್‌ ಅಸಲಿಯೋ….? ನಕಲಿಯೋ….? ಸುಲಭವಾಗಿ ಮನೆಯಲ್ಲೇ ಪರೀಕ್ಷಿಸಿ

ಪನೀರ್ ಅತ್ಯಂತ ಆರೋಗ್ಯಕರ ಆಹಾರಗಳಲ್ಲೊಂದು. ಇದು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇತರ ಅನೇಕ ಪೌಷ್ಟಿಕಾಂಶಗಳು ಸಹ ಪನೀರ್‌ನಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಲಬೆರಕೆ ಪನೀರ್‌ ಮಾರುಕಟ್ಟೆಗೆ ಬರುತ್ತಿದೆ. ಈ ಕಲಬೆರಕೆ ವಸ್ತುಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಹಾಗಾಗಿ ನಾವು ಸೇವಿಸುತ್ತಿರುವ ಪನೀರ್‌ ಅಸಲಿಯೋ, ನಕಲಿಯೋ ಎಂಬುದನ್ನು ಪತ್ತೆ ಮಾಡಬೇಕು.

ಪನೀರ್‌ನ ಶುದ್ಧತೆಯನ್ನು ಮನೆಯಲ್ಲಿಯೇ ಸುಲಭವಾಗಿ ಕಂಡುಹಿಡಿಯಬಹುದು. ಪನೀರ್‌ ಅನ್ನು ಮ್ಯಾಶ್‌ ಮಾಡಿದ ಬಳಿಕ ಉದುರುದುರಾಗಿದ್ದರೆ ಅದು ನಕಲಿ ಎಂದರ್ಥ. ವಾಸ್ತವವಾಗಿ ಕೆನೆ ತೆಗೆದ ಹಾಲಿನ ಪುಡಿಯಿಂದ ತಯಾರಿಸಿದ ನಕಲಿ ಪನೀರ್ ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳುವುದಿಲ್ಲ, ಪುಡಿಯಾಗಿ ಹೋಗುತ್ತದೆ.

ಬಿಗಿಯಾಗಿದ್ದರೆ ಪನೀರ್ ನಕಲಿ ಎಂದರ್ಥ. ಶುದ್ಧ ಮತ್ತು ಅಸಲಿ ಪನೀರ್ ತುಂಬಾ ಮೃದುವಾಗಿರುತ್ತದೆ. ನಕಲಿ ಪನೀರ್ ಬಿಗಿಯಾಗಿರುತ್ತದೆ ಮತ್ತು ರಬ್ಬರ್‌ನಂತೆ ವಿಸ್ತರಿಸುತ್ತದೆ. ಅಯೋಡಿನ್ ಟಿಂಚರ್ ಅನ್ನು ರಾಸಾಯನಿಕ ಪ್ರಕ್ರಿಯೆಯಿಂದ ಪನೀರ್‌ನ ಶುದ್ಧತೆಯನ್ನು ಪರೀಕ್ಷಿಸಲು ಬಳಸಲಾಗುತ್ತದೆ.

ಇದಕ್ಕಾಗಿ ಪನೀರ್ ಅನ್ನು ನೀರಿನಲ್ಲಿ ಕುದಿಸಿ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ಕೆಲವು ಹನಿ ಅಯೋಡಿನ್ ಟಿಂಚರ್ ಸೇರಿಸಿ. ಪನೀರ್‌ನ ಬಣ್ಣವು ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ಪನೀರ್‌ ನಕಲಿ ಎಂಬುದು ಖಚಿತ. ನಕಲಿ ಪನೀರ್‌ ಸೇವನೆ ಆರೋಗ್ಯಕ್ಕೆ ಹಾನಿಕರ. ಹಾಗಾಗಿ ಈ ಸುಲಭ ವಿಧಾನಗಳ ಮೂಲಕ ಪನೀರ್‌ನ ಶುದ್ಧತೆಯನ್ನು ಪರೀಕ್ಷಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read