ಟೀ ಬಿಟ್ರೆ ಕಡಿಮೆಯಾಗುತ್ತಾ ನಿಮ್ಮ ತೂಕ ?

ಭಾರತದಲ್ಲಿ ಟೀ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಜನರು ಟೀ ಸೇವನೆ ಮಾಡ್ತಾರೆ. ಈ ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ. ತೂಕ ಇಳಿಸಿಕೊಳ್ಳಲು ಬಯಸುವವರು ಹಾಲು ಬೆರೆಸಿದ ಟೀನಿಂದ ದೂರವಿರುವುದು ಒಳ್ಳೆಯದು.

ಟೀನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಇರುತ್ತದೆ. ಹಾಲು ಹಾಗೂ ಸಕ್ಕರೆ ತೂಕ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ದೈನಂದಿನ ಕ್ಯಾಲೋರಿ ಹಾಗೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನೀವು ಟೀ ಸೇವನೆ ಮಾಡಬೇಕು. ದಿನಕ್ಕೆ ಎರಡು ಕಪ್‌ ಟೀಗಿಂತ ಹೆಚ್ಚು ಕಪ್‌ ಸೇವನೆ ಒಳ್ಳೆಯದಲ್ಲ. ಚಹಾಕ್ಕೆ ಬೆರೆಸುವ ಸಕ್ಕರೆ ಹಾಗೂ ಬೆಲ್ಲ ಎರಡರಲ್ಲೂ ಸಮ ಪ್ರಮಾಣದ ಕ್ಯಾಲೋರಿ ಹೊಂದಿರುತ್ತದೆ. ಇದು ನಿಮ್ಮ ತೂಕ ಹೆಚ್ಚಿಸುತ್ತದೆ.

ನೀವು ಪ್ರತಿ ದಿನ ಎರಡಕ್ಕಿಂತ ಹೆಚ್ಚು ಕಪ್‌ ಟೀ ಸೇವನೆ ಮಾಡುವವರಾಗಿದ್ದರೆ ಇಂದೇ ಅದನ್ನು ನಿಯಂತ್ರಿಸಿ. ಹಾಲು ಬೆರೆಸಿದ ಟೀ ಬದಲು ಗ್ರೀನ್‌ ಟೀ ಅಥವಾ ಬ್ಲಾಕ್‌ ಟೀ ಸೇವನೆ ಮಾಡಬಹುದು. ಇಲ್ಲವೆ ನೀರು ಹಾಗೂ ಜ್ಯೂಸ್‌ ನಂತಹ ದ್ರವ ಆಹಾರ ಸೇವನೆ ಮಾಡುವ ಮೂಲಕ ದೇಹವನ್ನು ಹೈಡ್ರೀಕರಿಸಬಹುದು. ಹಾಲು ಅಥವಾ ಕೆನೆಯಿಂದ ಮಾಡಿದ ಚಹಾವು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರಬಹುದು. ಇದು ತೂಕ ಹೆಚ್ಚಳ, ಹೃದಯದ ಆರೋಗ್ಯವನ್ನು ಹಾಳು ಮಾಡಬಹುದು. ಆತಂಕ, ಅಧಿಕ ಕಾರ್ಟಿಸೋಲ್, ಶುಗರ್‌, ಮತ್ತು ಹೈಪರ್ ಆಸಿಡಿಟಿ ಇರುವವರು ಚಹಾ ಸಹವಾಸಕ್ಕೆ ಹೋಗಬಾರದು. ಟೀ ಸೇವನೆ ಮಾಡುವವರು ಕೂಡ ಊಟ, ಆಹಾರ ತಿಂದ ತಕ್ಷಣ ಟೀ ಸೇವನೆ ಮಾಡಬೇಡಿ. ಒಂದರಿಂದ ಎರಡು ಗಂಟೆ ಬಿಟ್ಟು ಚಹಾ ಕುಡಿಯಿರಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read