ದೇವರು’, ‘ದೇವ-ಮಾನವರ’ ಮೇಲಿನ ಅವಿವೇಕದ ನಂಬಿಕೆಯೇ ಹತ್ರಾಸ್ ದುರಂತಕ್ಕೆ ಕಾರಣ : ನಟ ಚೇತನ್ ಅಹಿಂಸಾ

ಬೆಂಗಳೂರು : ದೇವರು’, ‘ದೇವ-ಮಾನವರ’ ಮೇಲಿನ ಅವಿವೇಕದ ನಂಬಿಕೆಯೇ ಇಂತಹ ದುರಂತಕ್ಕೆ ಕಾರಣ ಎಂದು ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.

ಹತ್ರಾಸ್ ಕಾಲ್ತುಳಿತ ದುರಂತದಲ್ಲಿ 124 ಮಂದಿ ಮೃತಪಟ್ಟಿದ್ದು, ಈ ಬಗ್ಗೆ ನಟ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ  ಪೋಸ್ಟ್ ಹಂಚಿಕೊಂಡಿದ್ದಾರೆ.

”ಉತ್ತರ ಪ್ರದೇಶದ ಹತ್ರಾಸ್ನಲ್ಲಿನ ಧಾರ್ಮಿಕ ಸಭೆಯಲ್ಲಿ ನಿನ್ನೆ ಸಂಭವಿಸಿದ ಕಾಲ್ತುಳಿತವು 122 ಜನರನ್ನು ಬಲಿ ತೆಗೆದುಕೊಂಡಿತು, ಇದರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ದೇವರು ಮತ್ತು ‘ದೇವ-ಮಾನವರು’ ಮೇಲಿನ ಅವಿವೇಕದ ನಂಬಿಕೆಯೇ ಇಂತಹ ದುಃಖದ ಸಾವುಗಳಿಗೆ ಕಾರಣವಾಯಿತು.
ನಾವು ನಿಜವಾದ ತರ್ಕಬದ್ಧ ಮನಸ್ಸುಗಳನ್ನು ಬೆಳೆಸುವವರೆಗೆ ಭಾರತವು ಒಂದು ರಾಷ್ಟ್ರವಾಗಿ ಕುಂಠಿತ ಬೆಳವಣಿಗೆಯನ್ನು ಹೊಂದಿರುತ್ತದೆ” ಎಂದು ಹೇಳಿದ್ದಾರೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read