Viral Video | ದೇಸೀ ಅವತಾರದಲ್ಲಿ ಬಂದ ʼಅವೆಂಜರ್ಸ್ʼ

ಅವೆಂಜರ್ಸ್: ಇನ್ಪಿನಿಟಿ ವಾರ್‌ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಐದು ವರ್ಷಗಳು ಕಳೆದಿವೆ. ಆದರೂ ಸಹ ಈ ಚಿತ್ರದ ಸೂಪರ್‌ ಹೀರೋಗಳಾದ ಥಾನೋಸ್ ಹಾಗೂ ರಾಬರ್ಟ್ ಡೌನಿ ಜೂನಿಯರ್‌ ಒಂದೇ ಏಟಿಗೆ ಇನ್ಪಿನಿಟಿ ಸ್ಟೋನ್ಸನ್ನು ಧ್ವಂಸ ಮಾಡುವ ದೃಶ್ಯ ನಮ್ಮ ಮನಸ್ಸುಗಳ ಆಳದಲ್ಲಿ ನೆಟ್ಟಿದೆ.

ಅವೆಂಜರ್ಸ್‌ನ ದೇಸೀ ಅವತಾರಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್‌ನಲ್ಲಿ ಥಾನೋಸ್‌ನ ಮಿನಿಯನ್‌ಗಳನ್ನು ಎದುರಿಸಲು ಹೋಗುವ ಐರನ್ ಮ್ಯಾನ್, ಹಲ್ಕ್, ಡಾ. ಸ್ಟ್ರೇಂಜ್ ಮತ್ತು ವಾಂಗ್‌ಗಳು ನೆನಪಿದ್ದಾರೆಯೇ?

ಅದೇ ದೃಶ್ಯದ ದೇಸೀ ಅವತಾರವನ್ನು ಈ ವಿಡಿಯೋ ತೋರುತ್ತದೆ. ಈ ವಿಡಿಯೋದಲ್ಲಿ ಐರನ್ ಮ್ಯಾನ್ ಪಾತ್ರಧಾರಿ ಒಬ್ಬ ಸಿಖ್ ಆಗಿದ್ದು, ಆತನಿಗೆ ಲೋಹದ ಪಗಡಿಯೂ ಇದೆ!

3.48 ಲಕ್ಷಕ್ಕೂ ಅಧಿಕ ಲೈಕ್‌ಗಳು ಹಾಗೂ ಸಿಕ್ಕಾಪಟ್ಟೆ ಪ್ರತಿಕ್ರಿಯೆಗೆ ಭಾಜನವಾಗಿರುವ ಈ ವಿಡಿಯೋ ಪೋಸ್ಟ್‌‌ ನೋಡಿದ ಜನರು ಇಂಥಾ ಒಂದು ಸೂಪರ್‌ ಐಡಿಯಾ ಮಾಡಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

https://twitter.com/GACKTED/status/1171536181885988869

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read