ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲುಗಳಲ್ಲಿ ಊಟ ಪೂರೈಸಲು ಸ್ವಿಗ್ಗಿಯೊಂದಿಗೆ IRCTC ಒಪ್ಪಂದ

ನವದೆಹಲಿ: IRCTC ಯ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ರೈಲು ಪ್ರಯಾಣಿಕರಿಗೆ ಪೂರ್ವ-ಆರ್ಡರ್ ಮಾಡಿದ ಊಟದ ಪೂರೈಕೆ ಮತ್ತು ವಿತರಣೆಗಾಗಿ ಸ್ವಿಗ್ಗಿ ಫುಡ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(IRCTC) ಗುರುವಾರ ಪ್ರಕಟಿಸಿದೆ.

ಮೊದಲ ಹಂತದ ಭಾಗವಾಗಿ ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ ರೈಲು ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.

IRCTC ಬಂಡ್ಲ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್(Swiggy ಫುಡ್ಸ್) ಜೊತೆಗೆ IRCTC ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಮುಂಗಡ-ಆರ್ಡರ್ ಮಾಡಿದ ಊಟವನ್ನು ಸರಬರಾಜು ಮಾಡಲು ಮತ್ತು ತಲುಪಿಸಲು ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣ ನಾಲ್ಕು ರೈಲು ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ PoC ಒಪ್ಪಂದ ಮಾಡಿಕೊಂಡಿದೆ.

IRCTC ಯಾವುದೇ ಆಹಾರ ವಿತರಣಾ ವೇದಿಕೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, IRCTC ಆಹಾರ ವಿತರಣಾ ವೇದಿಕೆ ಜೊಮಾಟೊದೊಂದಿಗೆ ತನ್ನ ಪಾಲುದಾರಿಕೆಯನ್ನು ಘೋಷಿಸಿತು. ಈ ಪಾಲುದಾರಿಕೆಯು ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ಪೂರ್ವ-ಆರ್ಡರ್ ಮಾಡಿದ ಆಹಾರದ ಪೂರೈಕೆ ಮತ್ತು ವಿತರಣೆಯ ಗುರಿ ಹೊಂದಿದೆ. ಭಾರತೀಯ ರೈಲ್ವೇ ಪ್ರಯಾಣಿಕರು ಪ್ರಯಾಗ್‌ರಾಜ್, ನವದೆಹಲಿ, ಕಾನ್ಪುರ್, ವಾರಣಾಸಿ ಮತ್ತು ಲಕ್ನೋವನ್ನು ಒಳಗೊಂಡ ಆಯ್ದ ರೈಲು ನಿಲ್ದಾಣಗಳಲ್ಲಿ ಸೇವೆಗಳನ್ನು ಪಡೆಯಬಹುದು.

ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ ಮತ್ತು Swiggy ಮತ್ತು IRCTC ನಡುವಿನ ಈ ಪಾಲುದಾರಿಕೆಯು ಆಹಾರ ವಿತರಣಾ ವೇದಿಕೆಯ ವ್ಯವಹಾರವನ್ನು ಹೆಚ್ಚಿಸುವ ಸಾಧ್ಯತೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read