’ಧೋನಿ ರಿವ್ಯೂ ಸಿಸ್ಟಂ’: ಡಿಆರ್‌ಎಸ್ ಬಳಸುವಲ್ಲಿ ಧೋನಿ ನಿಖರತೆಗೆ ಬೆರಗಾದ ಅಭಿಮಾನಿಗಳು

ದೇಶದ ಕ್ರಿಕೆಟ್ ಲೋಕದ ಅತ್ಯಂತ ದೊಡ್ಡ ಹೆಸರುಗಳಲ್ಲಿ ಒಂದಾಗಿರುವ ಮಹೇಂದ್ರ ಸಿಂಗ್ ಧೋನಿ ಬಹುಶಃ ಈ ಬಾರಿ ತಮ್ಮ ಕೊನೆಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ ಎನ್ನಲಾಗುತ್ತಿದೆ.

ತಮ್ಮ ಮೆಚ್ಚಿನ ಆಟಗಾರ ಕೊನೆಯ ಬಾರಿಗೆ ಅಧಿಕೃತವಾಗಿ ಮೈದಾನಕ್ಕಿಳಿಯುವುದನ್ನು ಕಾಣಲು ಐಪಿಎಲ್ ಪಂದ್ಯಗಳು ನಡೆಯುವ ಯಾವುದೇ ಕ್ರೀಡಾಂಗಣವಾದರೂ ಸರಿ, ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಆಡುವ ಪಂದ್ಯಗಳಿಗೆ ಕಾತರದಿಂದ ಕಾಯುತ್ತಿದ್ದಾರೆ ಕ್ರೀಡಾಭಿಮಾನಿಗಳು.

ಮೈದಾನದಲ್ಲಿ ತಮ್ಮ ಚುರುಕುತನಕ್ಕೆ ಹೆಸರಾದ ಧೋನಿ, ಅಂಪೈರ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಚಾರದಲ್ಲಿ ಅದೆಷ್ಟು ಕರಾರುವಕ್ಕಾಗಿರುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಬಿಡಿಸಿ ಹೇಳಲೇಬೇಕಿಲ್ಲ ಅಲ್ಲವೇ?

’ಡಿಆರ್‌ಎಸ್‌’ ಅನ್ನು ’ಧೋನಿ ರಿವ್ಯೂ ಸಿಸ್ಟಂ’ ಎಂದೇ ಆಪ್ತವಾಗಿ ಕರೆಯುವ ಮಟ್ಟಿಗೆ ಧೋನಿ ಡಿಆರ್‌ಎಸ್‌ ಮನವಿಯನ್ನು ಬಳಸಿಕೊಂಡಿದ್ದಾರೆ. ಚೆನ್ನೈ ಹಾಗೂ ಕೋಲ್ಕತ್ತಾ ತಂಡಗಳ ನಡುವಿನ ಐಪಿಎಲ್ ಪಂದ್ಯದ ವೇಳೆ ತೋರಲಾದ ಅಂಕಿಅಂಶವೊಂದು, ಧೋನಿ ಡಿಆರ್‌ಎಸ್‌ ಮನವಿ ಬಳಸಿದ 85.71% ಸಂದರ್ಭಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ತೋರಿದೆ.

ಪಂದ್ಯದಲ್ಲಿ ಕೋಲ್ಕತ್ತಾ ಬ್ಯಾಟಿಂಗ್ ಮಾಡುವ ವೇಳೆ ಡೇವಿಡ್ ವಿರುದ್ಧ ತುಷಾರ್‌ ದೇಶಪಾಂಡೆರ ಎಲ್‌ಬಿಡಬ್ಲ್ಯೂ ಮನವಿಯನ್ನು ಅಂಪೈರ್‌‌ ತಿರಸ್ಕರಿಸುತ್ತಾರೆ. ಕೂಡಲೇ ಧೋನಿ ಡಿಆರ್‌ಎಸ್‌ ಮೊರೆ ಹೋಗಿ ಅದರಲ್ಲಿ ಯಶಸ್ವಿಯಾಗುತ್ತಾರೆ. ಈ ವೇಳೆ ತೋರಲಾದ ಅವರ ಡಿಆರ್‌ಎಸ್ ಮನವಿಯ ನಿಖರತೆಯ ದರವನ್ನು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡು, ಧೋನಿಯ ಚಾಣಾಕ್ಷತನ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ.

https://twitter.com/snthl_kmr/status/1650202392921776128?ref_src=twsrc%5Etfw%7Ctwcamp%5Etweetembed%7Ctwterm%5E1650202392921776128%7Ctwgr%5Eb0bc91d76d436b908b9f1b04eb429a77a6f78b05%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fipl-2023-netizens-applaud-dhoni-review-system-as-csk-skipper-calls-for-drs-check-twitter-reactions

https://twitter.com/SillyContext/status/1650202220435046400?ref_src=twsrc%5Etfw%7Ctwcamp%5Etweetembed%7Ctw

https://twitter.com/AkshatAkash42/status/1650200830891692032?ref_src=twsrc%5Etfw%7Ctwcamp%5Etweetembed%7Ctwterm%

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read