ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯ ಆಯೋಜನೆಯಾಗಿದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಹಳದಿಮಯವಾಗಿತ್ತು. ಹಾಲಿ ಚಾಂಪಿಯನ್ – ತವರು ತಂಡ ಗುಜರಾತ್ ಟೈಟಾನ್ಸ್ 4 ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಖಾಮುಖಿ ನೋಡಲು ಅಭಿಮಾನಿಗಳು ಸ್ಟೇಡಿಯಂ ತುಂಬ ನೆರೆದಿದ್ದರು.
ಬೆಳಗ್ಗೆಯಿಂದಲೇ ಅಹಮದಾಬಾದ್ ನ ಎಲ್ಲೆಡೆ ಎಂಎಸ್ ಧೋನಿ ಅಭಿಮಾನಿಗಳು ಧೋನಿ ಧೋನಿ ಎಂಬ ಘೋಷಣೆ ಕೂಗಿದ್ದರು. ಸ್ಟೇಡಿಯಂ ಸುತ್ತ ಸೇರಿದಂತೆ ನಗರದ ಪ್ರಮುಖ ನಿಲ್ದಾಣಗಳು, ಮೆಟ್ರೋ ರೈಲು ಸೇರಿದಂತೆ ಧೋನಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಗುಜರಾತ್ ನಗರದ ಮೂಲೆ ಮೂಲೆಗಳಲ್ಲಿ ಧೋನಿ ಅಭಿಮಾನಿಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
https://twitter.com/Motera_Stadium/status/1662774951886327808?ref_src=twsrc%5Etfw%7Ctwcamp%5Etweetembed%7Ctwterm%5E1662774951886327808%7Ctwgr%5Eb44bde70424330b59a49d2f435939a18f0bcd2f7%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fipl2023msdhonifanstakeoverahmedabadaheadofcskvsgtfinalwatchviralvideo-newsid-n504136920