ಕಾರ್ಮಿಕ ಇಲಾಖೆಯ ತಾಲೂಕು ಕಚೇರಿಗಳಲ್ಲಿ ಫೋಟೊಗ್ರಾಫರ್ , ವಿಡೀಯೋಗ್ರಾಫರ್’ಗಳ ನೋಂದಣಿಗೆ ಆಹ್ವಾನ

ಧಾರವಾಡ : ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಧಾರವಾಡ ಜಿಲ್ಲೆಯ ಜಿಲ್ಲಾ ಅಧ್ಯಕ್ಷರ ಹಾಗೂ ಎಲ್ಲ ತಾಲೂಕಿನ ಛಾಯಾಗ್ರಾಹಕ ಸಂಘಗಳ ಅಧ್ಯಕ್ಷರ ಸಭೆಯನ್ನು ಧಾರವಾಡ ವಾರ್ತಾ ಇಲಾಖೆಯ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಸೆಪ್ಟೆಂಬರ 9 ಮತ್ತು 10 ರಂದು ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಪಡೆಯಲು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ, ಜಿಲ್ಲೆಯ ಎಲ್ಲ ತಾಲ್ಲೂಕಿನ ಕಾರ್ಮಿಕ ಇಲಾಖೆಯ ಕಛೇರಿಯಲ್ಲಿ ಫೋಟೋಗ್ರಾಫರ್ಸ್ಗಳಿಗೆ ಕಾರ್ಮಿಕ ಇಲಾಖೆಯಿಂದ ಉಚಿತವಾಗಿ ನೋಂದಾಯಿಸಿಕೊಂಡು ಅಸಂಘಟಿತ ಕಾರ್ಮಿಕರ ಕಾರ್ಡುಗಳನ್ನು ಮಾಡಿಕೊಡಿಕೊಳ್ಳಲು ಅವಕಾಶ ನೀಡಲಾಗಿದೆ.

ಈಗಾಗಲೇ ಅಸಂಘಟಿತ ಕಾರ್ಮಿಕ ಕಾರ್ಡ್ ಹೊಂದಿರುವ ಛಾಯಾಗ್ರಾಹಕರು ಸಹ ಸೆಪ್ಟೆಂಬರ 9 ಮತ್ತು 10 ರಂದು ತಮ್ಮ ತಾಲೂಕಿನ ಕಾರ್ಮಿಕ ಇಲಾಖೆಯ ಕಚೇರಿಗೆ ಭೇಟಿ ನೀಡಿ, ತಮ್ಮ ನೋಂದಣಿಯನ್ನು ದೃಢಪಡಿಸಿಕೊಳ್ಳಬೇಕು. ಹೊಸದಾಗಿ ನೋಂದಣಿಗೆ ಛಾಯಾಗ್ರಾಹಕರು ತಮ್ಮ ಒಂದು ಪಾಸ್ಪೋರ್ಟ ಸೈಜ್ ಫೋಟೊ, ಬ್ಯಾಂಕ್ ಪಾಸ್ಬುಕ್ ಝರಾಕ್ಸ್ ಪ್ರತಿ ಮತ್ತು ಆಧಾರ ಕಾರ್ಡ್ ಪ್ರತಿ ತೆಗೆದುಕೊಂಡು ಬರಬೇಕು. ತಮ್ಮ ಕುಟುಂಬದ ಪಡಿತರ ಚೀಟಿ ಇದ್ದರೆ ಅದನ್ನು ಸಹ ತರಬಹುದು.

ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ತಾಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಪ್ರಕ್ರೀಯೆ ಜರುಗಲಿದೆ.

ಕಾರ್ಮಿಕ ಇಲಾಖೆಯ ಈ ಪ್ರಯೋಜನವನ್ನು ಜಿಲ್ಲೆಯ ಎಲ್ಲ ಫೋಟೊಗ್ರಾಫರ್ಸ್, ವಿಡೀಯೋಗ್ರಾಫರ್ಸ್ಗಳು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮಾರಿಕಾಂಬಾ, ಹಿರಿಯ ಕಾರ್ಮಿಕ ನಿರೀಕ್ಷರ (9480068995) ಹುಬ್ಬಳ್ಳಿ, ಅಕ್ಬರ ಮುಲ್ಲಾ, ಹಿರಿಯ ಕಾರ್ಮಿಕ ನಿರೀಕ್ಷರು (9964178078) ಧಾರವಾಡ, ಹಿರಿಯ ಕಾರ್ಮಿಕ ನಿರೀಕ್ಷರಾದ ಲತಾ, ಕಲಘಟಗಿ (9986594945), ಮೀನಾಕ್ಷಿ ಶಿಂದಿಹಟ್ಟಿ, ಅಳ್ನಾವರ (6363520066), ಭುವನೇಶ್ವರಿ ಕೋಟಿಮಠ, ಧಾರವಾಡ (7022527066), ಅಕ್ರಂ ಅಲ್ಲಾಪೂರ, ಹುಬ್ಬಳ್ಳಿ ಶಹರ (9606366429), ಅಶೋಕ ಒಡಿಯರ್, ಹುಬ್ಬಳ್ಳಿ ಗ್ರಾಮೀಣ (70190101998, 9019991255), ರಜನಿ ಹಿರೇಮಠ, ಕುಂದಗೋಳ (9620629013), ಸಂಗೀತಾ ಬೆನಕನಕೊಪ್ಪ, ಅಣ್ಣಿಗೇರಿ ಮತ್ತು ನವಲಗುಂದ (9620727370) ಹಾಗೂ ಫೋಟೊಗ್ರಾಫರ್ಸ್ ಸಂಘದ ಪ್ರಮುಖರಾದ ದತ್ತಪ್ರಸಾದ ವೆಂಕಟೇಶ (9845128653), ಕಿರಣ ಬಾಕಳೆ (9448136285) ಮತ್ತು ಪ್ರಭಯ್ಯ ಲಕ್ಕುಂಡಿಮಠ (9986268406) ಅವರನ್ನು ಸಂಪರ್ಕಿಸಬಹುದೆಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read