ಬೆಂಗಳೂರು: ನಿವೃತ್ತ ಡಿಜಿ ಐಜಿಪಿ ಓಂಪ್ರಕಾಶ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ.
ಓಂಪ್ರಕಾಶ್ ರಾವ್ ಪುತ್ರ ಕಾರ್ತಿಕೇಶ್ ಹೇಳಿಕೆ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ಇಂದು ಅಥವಾ ನಾಳೆ ಕಾರ್ತಿಕೇಶ್ ಹೇಳಿಕೆಯನ್ನು ಸಿಸಿಬಿ ಪೊಲೀಸರು ದಾಖಲಿಸಲಿದ್ದಾರೆ. ಮತ್ತೊಂದೆಡೆ ಎಫ್.ಎಸ್.ಎಲ್. ವರದಿ ಇನ್ನೂ ಪೊಲೀಸರ ಕೈಸೇರಿಲ್ಲ. ಎಫ್.ಎಸ್.ಎಲ್. ವರದಿ ನಂತರ ಮಗಳು ಕೃತಿ ಪಾತ್ರ ಬಹಿರಂಗವಾಗಲಿದೆ.
ಮಗಳು ಕೃತಿ ಪಾತ್ರವಿಲ್ಲ, ನಾನೇ ಕೊಂದಿದ್ದು ಎಂದು ಓಂಪ್ರಕಾಶ್ ಪತ್ನಿ ಪಲ್ಲವಿ ಹೇಳುತ್ತಿದ್ದಾರೆ. ಆದರೆ, ಮಾನಸಿಕ ಅಸ್ವಸ್ಥತೆ ಆದ ಕಾರಣ ಅವರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ನಂಬಲು ಅಸಾಧ್ಯ. ಹೀಗಾಗಿ ಫಿಂಗರ್ ಪ್ರಿಂಟ್ ನ ಎಫ್.ಎಸ್.ಎಲ್. ವರದಿ ಬಂದರೆ ಕ್ಲಾರಿಟಿ ಸಿಗಲಿದೆ.
ಇಂದು ಅಥವಾ ನಾಳೆ ಎಫ್.ಎಸ್.ಎಲ್. ರಿಪೋರ್ಟ್ ಸಿಸಿಬಿ ಪೊಲೀಸರ ಕೈ ಸೇರಲಿದೆ. ಅಲ್ಲದೆ, ಕೃತಿ ಮಾನಸಿಕ ಸ್ಥಿತಿ ಹೇಗಿದೆ ಎಂದು ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ವೈದ್ಯರಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಮಾತ್ರ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲಾಗುವುದು ಎನ್ನಲಾಗಿದೆ.