ಜೂನ್ 21ರಂದು ಇಡೀ ಮನುಕುಲವೇ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದ ವೇಳೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾನಿ ಸುಲ್ತಾನ್ ಅಲ್ ನೆಯಾದಿ, ಬಾಹ್ಯಾಕಾಶದಲ್ಲೇ ಯೋಗಾಸನ ಮಾಡುವ ತಮ್ಮ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
“ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ನಾನು ಐಎಸ್‌ಎಸ್‌ನಲ್ಲಿ ಯೋಗಾಭ್ಯಾನ ಮಾಡಿರುವ ಚಿತ್ರ ಇದು. ನನ್ನ ಮೆಚ್ಚಿನದ್ದು. ಯೋಗದಿಂದ ದೇಹ ಬಲಗೊಳ್ಳುವುದು ಮಾತ್ರವಲ್ಲದೇ, ಮನಸ್ಸನ್ನೂ ಹದಗೊಳಿಸಿ ಒತ್ತಡ ನಿವಾರಣೆ ಮಾಡುತ್ತರೆ. ನಿಮ್ಮ ಮೆಚ್ಚಿನ ಯೋಗಾಸನ ಯಾವುದು?,” ಎಂದು ತಮ್ಮ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ ಸುಲ್ತಾನ್.
ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನಚಾರಣೆ ಮಾಡಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಸಂಸ್ಥೆಗೆ 2014ರಲ್ಲಿ ಮನವಿ ಮುಂದಿಟ್ಟಿದ್ದು. 2015ರಲ್ಲಿ ವಿಶ್ವ ಸಂಸ್ಥೆಯ ಮಹಾ ಸಭೆ ಈ ಕೋರಿಕೆಗೆ ಅಸ್ತು ಎಂದಿತ್ತು.
https://twitter.com/Astro_Alneyadi/status/1671522222760947714?ref_src=twsrc%5Etfw%7Ctwcamp%5Etweetembed%7Ctwterm%5E1671522222760947714%7Ctwgr%5Ec41c65aa85addbd643ef1458230b33a4a128a87a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Finternational-yoga-day-astronaut-sultan-tries-yoga-asana-in-space-2396070-2023-06-21