ಮತದಾರರ ‘ಗುರುತಿನ ಚೀಟಿ’ ಮ್ಯಾಪಿಂಗ್ ಮಾಡಿಕೊಳ್ಳಲು ಸೂಚನೆ

ಬಳ್ಳಾರಿ : ನಗರ ವಿಧಾನಸಭಾ ಕ್ಷೇತ್ರದ ಮತದಾರರು ಡಿ.13 ಮತ್ತು 14 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದ ಬಿಎಲ್‌ಒ ಗಳ ಬಳಿ ತೆರಳಿ ಮ್ಯಾಪಿಂಗ್ ಮಾಡಿಕೊಳ್ಳಬೇಕು ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯೂ ಆದ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ ಅವರು ತಿಳಿಸಿದ್ದಾರೆ.

ಕೇಂದ್ರ ಮುಖ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮುಂಬರುವ ದಿನಗಳಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಪ್ರಾರಂಭವಾಗಲಿದ್ದು, ನಗರ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮ್ಯಾಪಿಂಗ್ ಆಗದಿರುವ ಪ್ರಯುಕ್ತ ಎಸ್.ಐ.ಆರ್ ಕಾರ್ಯ ಸುಗಮವಾಗಿ ನಡೆಯಲು 2002 ರಲ್ಲಿ ಮತದಾನ ಮಾಡಿದ ಮತದಾರರನ್ನು 2025 ರ ಮತದಾರರ ಪಟ್ಟಿಯಲ್ಲಿ ಗುರುತಿಸಿ ಈ ಮತದಾರರ ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟ ಮ್ಯಾಪಿಂಗ್ ಆದ ಮತದಾರರ ಸಂತತಿಯವರನ್ನು (18 ವರ್ಷ ಮೇಲ್ಪಟ್ಟ 40 ವರ್ಷ ಒಳಗಿನ ಮತದಾರರನ್ನು) ಗುರುತಿಸಿ ಮ್ಯಾಪಿಂಗ್ ಮತ್ತು ಪ್ರೊಜಿನಿ ಕಾರ್ಯ ಪೂರ್ಣಗೊಳಿಸಬೇಕಾಗಿದೆ.

ಹಾಗಾಗಿ ನಗರ ವ್ಯಾಪ್ತಿಯ ಮತದಾರರು ಡಿ.13 ಮತ್ತು 14 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ತಮ್ಮ ಸಮೀಪದ ಮತದಾನ ಮಾಡುವ ಕೇಂದ್ರದ ಬಿ.ಎಲ್.ಒ ಗಳನ್ನು ಭೇಟಿಯಾಗಿ ಪ್ರಸ್ತುತ ನಿಮ್ಮ ಮತದಾನದ ಗುರುತಿನ ಚೀಟಿಯೊಂದಿಗೆ 2002 ರಲ್ಲಿ ನೀವು ಮತದಾನ ಮಾಡಿದ ಗುರುತಿನ ಚೀಟಿ, ಮತದಾನ ಮಾಡಿದ ಮತಕ್ಷೇತ್ರ, ಮತದಾನ ಕೇಂದ್ರ, ಕ್ರಮ ಸಂಖ್ಯೆಯನ್ನು ಬಿ.ಎಲ್.ಒ ಗಳಿಗೆ ಮಾಹಿತಿ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read