ಬೆಂಗಳೂರು : ಗಾಳಿಯಲ್ಲಿ ಗುಂಡು ಹೊಡೆಯುವ ಬದಲು ಚುನಾವಣಾ ಆಯೋಗಕ್ಕೆ ಸಾಕ್ಷ್ಯಾಧಾರಗಳ ಮೂಲಕ ಪ್ರಮಾಣ ಪತ್ರ ಸಲ್ಲಿಸಿ ಎಂದು ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದೆ.
ಮಲ್ಲಿಕಾರ್ಜುನ ಖರ್ಗೆ ಅವರೇ, ಚುನಾವಣೆ ಅಕ್ರಮದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಧಿಕ್ಕರಿಸಿ, ಅಧಿಕಾರ ಉಳಿಸಿಕೊಳ್ಳಲು ತುರ್ತುಪರಿಸ್ಥಿತಿ ಹೇರಿ, ದೇಶದಲ್ಲಿ ಕರಾಳ ಶಾಸನ ಜಾರಿ ಮಾಡಿದವರು ಯಾರು? ಅಧಿಕಾರಕ್ಕಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಲು ಮತಗಳನ್ನು ಅಸಿಂಧುಗೊಳಿಸಿ ಸೋಲಿಸಿದ್ದು ಯಾರು? ಅಧಿಕಾರಕ್ಕಾಗಿ ಯಾವುದೇ ಹಂತಕ್ಕೂ ಹೋಗಲು ಕಾಂಗ್ರೆಸ್ ತಯಾರಿದೆ ಎಂಬುದು ಅಂದೇ ನಿಮ್ಮ ಪಕ್ಷ ಸಾಬೀತು ಮಾಡಿತ್ತು! ಸತತ ಸೋಲಿನಿಂದ ಕಂಗೆಟ್ಟು, ಗಾಳಿಯಲ್ಲಿ ಗುಂಡು ಹೊಡೆಯುವ ಬದಲು ಚುನಾವಣಾ ಆಯೋಗಕ್ಕೆ ಸಾಕ್ಷ್ಯಾಧಾರಗಳ ಮೂಲಕ ಪ್ರಮಾಣ ಪತ್ರ ಸಲ್ಲಿಸಿ ಎಂದು ಕಾಂಗ್ರೆಸ್ ಬಿಜೆಪಿ ತಿರುಗೇಟು ನೀಡಿದೆ.
ಮಾನ್ಯ @Kharge ಅವರೇ, ಚುನಾವಣೆ ಅಕ್ರಮದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಧಿಕ್ಕರಿಸಿ, ಅಧಿಕಾರ ಉಳಿಸಿಕೊಳ್ಳಲು ತುರ್ತುಪರಿಸ್ಥಿತಿ ಹೇರಿ, ದೇಶದಲ್ಲಿ ಕರಾಳ ಶಾಸನ ಜಾರಿ ಮಾಡಿದವರು ಯಾರು?
— BJP Karnataka (@BJP4Karnataka) August 16, 2025
ಅಧಿಕಾರಕ್ಕಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಲು ಮತಗಳನ್ನು ಅಸಿಂಧುಗೊಳಿಸಿ ಸೋಲಿಸಿದ್ದು ಯಾರು?… pic.twitter.com/nTTa8PDHSk