ಗೃಹಬಳಕೆ ಗ್ರಾಹಕರು ಇಚ್ಛಿಸಿದಲ್ಲಿ ಮಾತ್ರ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ: KERC ಸ್ಪಷ್ಟನೆ

ಬೆಂಗಳೂರು: ಹೊಸ ಮತ್ತು ತಾತ್ಕಾಲಿಕ ಹೊರತುಪಡಿಸಿ ಹಾಲಿ ಚಾಲ್ತಿ ವಿದ್ಯುತ್ ಗೃಹ ಬಳಕೆ ಗ್ರಾಹಕರು ಇಚ್ಛಿಸಿದರೆ ಮಾತ್ರ ಸ್ವಂತ ವೆಚ್ಚದಲ್ಲಿ ಪೂರ್ವ ಪಾವತಿ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲು ಅವಕಾಶ ಇದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC) ಸ್ಪಷ್ಟಪಡಿಸಿದೆ.

 ವಿದ್ಯುತ್ ಸರಬರಾಜು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸದಸ್ಯ ಕಾರ್ಯದರ್ಶಿ ಈ ಕುರಿತಾಗಿ ಪತ್ರ ಬರೆದು ತಿಳಿಸಿದ್ದಾರೆ.

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಗಳಿಗೆ ಈ ಮೂಲಕ ತೆರೆ ಎಳೆದಿದ್ದಾರೆ. ನೀರಾವರಿ ಪಂಪ್ಸೆಟ್ ಗಳನ್ನು ಹೊರತುಪಡಿಸಿ ತಾತ್ಕಾಲಿಕ ಮತ್ತು ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಇವುಗಳ ಪೈಕಿ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಪೂರ್ವ ಪಾವತಿ ಸ್ಮಾರ್ಟ್ ಮೀಟರ್ ಕಡ್ಡಾಯವೆಂದು ತಿಳಿಸಲಾಗಿದೆ.

ವಿದ್ಯುತ್ ಸಚಿವಾಲಯದ ಅಧಿಸೂಚನೆ, ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ಸ್ಮಾರ್ಟ್ ಮೀಟರ್ ಸ್ಥಾಪನೆ ಮತ್ತು ತಿದ್ದುಪಡಿ ಕಾಯ್ದೆಯ ಪ್ರಕಾರ ಕೆಎಆರ್‌ಸಿ ಅಧಿಸೂಚನೆ ಪ್ರಕಟಿಸಿ ಎಲ್ಲಾ ಎಸ್ಕಾಂಗಳಿಗೆ ನಿರ್ದೇಶನ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read