’ಕೇರಳ ಸ್ಟೋರಿ’ಯಿಂದ ಸ್ಪೂರ್ತಿ: ಅತ್ಯಾಚಾರ ಹಾಗೂ ಬಲವಂತದ ಮತಾಂತರಕ್ಕೆ ಪ್ರೇರಣೆ ಕೊಟ್ಟ ದೂರು ದಾಖಲಿಸಿದ ಮಾಡೆಲ್

ಲೈಂಗಿಕ ಕಿರುಕುಳ ನೀಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಆಪಾದನೆ ಮೇಲೆ ರಾಂಚಿ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಹಾರ ಮೂಲದ ಮಾಡೆಲ್ ಒಬ್ಬರು ಈ ಸಂಬಂಧ ದೂರು ಕೊಟ್ಟಿದ್ದಾರೆ.

ತಾನು ಭಾಗಲ್ಪುರದ ನಿವಾಸಿಯಾಗಿದ್ದು, ಮಾಡೆಲಿಂಗ್ ವರ್ಕ್‌ಶಾಪ್‌ಗೆಂದು ರಾಂಚಿಗೆ ತೆರಳಿದ್ದಾಗಿ ಹೇಳಿಕೊಂಡಿರುವ ಈಕೆ, ಅಲ್ಲಿ ಆಪಾದಿತನೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಈತ 2021ರಿಂದ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದು, ಬ್ಲಾಕ್‌ಮೇಲ್ ಮಾಡುತ್ತಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಆತನ ಈ ಬ್ಲಾಕ್‌ಮೇಲ್ ವಿಪರೀತವಾದ ಬೆನ್ನಿಗೆ ತಾನು ಮುಂಬೈಗೆ ಸ್ಥಳಾಂತರಗೊಂಡರೂ ಸಹ ಆತ ತನಗೆ ಬ್ಲಾಕ್‌ಮೇಲ್ ಮಾಡುವುದನ್ನು ಮುಂದುವರೆಸಿದ್ದಾಗಿ ತಾನು ಇಲ್ಲಿನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿರುವುದಾಗಿ ಈಕೆ ಹೇಳಿಕೊಂಡಿದ್ದಾರೆ.

ತನ್ವೀರ್‌ ಅಖ್ತರ್‌ ಮೊಹಮ್ಮದ್ ಖಾನ್ ಹೆಸರಿನ ಆಪಾದಿತನ ವಿರುದ್ಧ ಐಪಿಸಿಯ 376(2), 328, 506 504, 323 ಹಾಗೂ ಐಟಿ ಕಾಯಿದೆಯ 67ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ.

’ದಿ ಕೇರಳ ಸ್ಟೋರಿ’ ಚಿತ್ರ ವೀಕ್ಷಿಸಿದ ಬಳಿಕ ತನಗೆ ಹೀಗೆ ಮಾಡಲು ಧೈರ್ಯ ಬಂದಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

“ನಾನು 2020ರಲ್ಲಿ ಈತನ ಮಾಡೆಲಿಂಗ್ ಏಜೆನ್ಸಿ ಸೇರಿಕೊಂಡ ಬಳಿಕ ಇವೆಲ್ಲಾ ಆರಂಭಗೊಂಡಿವೆ. ಮೊದಲಿಗೆ ತನ್ನ ಹೆಸರು ಯಶ್ ಎಂದು ಹೇಳಿಕೊಂಡ ಈತನ ನಿಜ ನಾಮ ತನ್ವೀರ್‌ ಅಖ್ತರ್‌ ಎಂದು ನಾಲ್ಕು ತಿಂಗಳ ಬಳಿಕ ತಿಳಿದು ಬಂದಿದೆ. ಆತ ನನ್ನ ಚಿತ್ರಗಳನ್ನು ನನ್ನ ಕುಟುಂಬಸ್ಥರಿಗೆ ಕಳುಹಿಸುತ್ತಿದ್ದು, ನನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಿದ್ದಾನೆ. ಮುಂಬೈಯಲ್ಲಿ ಆತ ನನ್ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾನೆ. ’ದಿ ಕೇರಳ ಸ್ಟೋರಿ’ ಚಿತ್ರ ನೋಡಿದ ಬಳಿಕ ನನಗೆ ಆತನ ವಿರುದ್ಧ ದೂರು ಸಲ್ಲಿಸುವ ಆಲೋಚನೆ ಬಂತು,” ಎಂದು ದೂರುದಾರೆ ಹೇಳಿಕೊಂಡಿದ್ದಾರೆ.

ಪ್ರಕರಣವನ್ನು ರಾಂಚಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಹೆಸರಿನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ ಆಕ್ಷೇಪಾರ್ಹ ಫೋಟೋಗಳನ್ನು ಶೇರ್‌ ಮಾಡುತ್ತಿರುವ ಈತ ದೂರು ಕೊಟ್ಟ ಬಳಿಕ, ಇನ್ನೆಂದೂ ಹೀಗೆ ಕಿರುಕುಳ ಮಾಡುವುದಿಲ್ಲವೆಂದು ಅಫಿಡವಿಟ್ ಬರೆದುಕೊಡುವುದಾಗಿ ತಿಳಿಸಿದ್ದು, ದೂರು ವಾಪಸ್ ಪಡೆಯಲು ದಂಬಾಲು ಬಿದ್ದಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read