ಜೀವನದ ಪ್ರೀತಿಯನ್ನು ಹುಡುಕಿಕೊಂಡ ನಟ ವರುಣ್; ಲಾವಣ್ಯ ತ್ರಿಪಾಠಿಯೊಂದಿಗೆ ನಿಶ್ಚಿತಾರ್ಥ

ತೆಲುಗು ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಶುಕ್ರವಾರ ರಾತ್ರಿ ಹೈದರಾಬಾದ್‌ನಲ್ಲಿ ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವಜೋಡಿ ನಿಶ್ಚಿತಾರ್ಥದ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವರುಣ್ ಕುರ್ತಾ-ಪೈಜಾಮದಲ್ಲಿ ಕಾಣಿಸಿಕೊಂಡಿದ್ದರೆ, ಲಾವಣ್ಯ ಹಸಿರು ಸೀರೆಯಲ್ಲಿ ಮಿಂಚಿದ್ದಾರೆ. ಎಂಗೇಜ್ ಮೆಂಟ್ ಅಧಿಕೃತಗೊಳಿಸಿದ ವರುಣ್ ತೇಜ್ “ಫೈಂಡ್ ಮೈ ಲವ್” ಎಂದು ಫೋಟೋಗಳಿಗೆ ಶೀರ್ಷಿಕೆ ನೀಡಿದಾರೆ. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ, ಮಿಸ್ಟರ್ ಮತ್ತು ಅಂತರಿಕ್ಷ್ 9000 kmph ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಂತೆ ನವಜೋಡಿಗೆ ಸಿನಿಮಾ ತಾರೆಯರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದಾರೆ. ನಟ ಸುನೀಲ್ ಶೆಟ್ಟಿ, ಸಮಂತಾ ರುತ್ ಪ್ರಭು, ಲಕ್ಷ್ಮಿ ಮಂಚು ಹಾರೈಸಿದ್ದಾರೆ.

ವರುಣ್ ತೇಜ್ ನಟ ಮತ್ತು ನಿರ್ಮಾಪಕರ ಕುಟುಂಬಕ್ಕೆ ಸೇರಿದವರು. ಅವರು ನಟ-ನಿರ್ಮಾಪಕ ನಾಗೇಂದ್ರ ಬಾಬು ಅವರ ಮಗ. ಲಾವಣ್ಯ ತ್ರಿಪಾಠಿ 2012 ರ ಅಂದಾಲಾ ರಾಕ್ಷಸಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಲಾವಣ್ಯ ಮತ್ತು ವರುಣ್ ಮಿಸ್ಟರ್ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು ಮತ್ತು ಪ್ರೀತಿಸುತ್ತಿದ್ದರು ಎಂದು ವರದಿಯಾಗಿದೆ. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇತ್ತು.

Varun Tej, Lavanya Tripathi's engagement ceremony: Guests, outfits and more - The Statesman

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read