ನವದೆಹಲಿ: ಪಾಕಿಸ್ತಾನದ ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಧ್ವಂಸಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಸೇನೆ ಭಾರತದ ವಿರುದ್ಧ ನಿರಂತರವಾಗಿ ದಾಳಿ ನಡೆಸಲಾರಂಭಿಸಿದೆ. ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿ ಪಾಕ್ ಸೇನೆ ನಡೆಸಿದ್ದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಮೇ 7ರಂದು ನಿನ್ನೆ ರಾತ್ರಿ ಪಾಕಿಸ್ತಾನ ಸೇನೆ ಭಾರತದ 15ನಗರಳನ್ನು ಗುರಿಯಾಗಿಸಿಕೊಂಡು ಮೈಸೈಲ್ ದಾಳಿ ನಡೆಸಿದೆ. ಇದನ್ನು ಅರಿತ ಭಾರತೀಯ ಸೇನೆ ತಕ್ಷಣ ಕರ್ಯೋನ್ಮುಖವಾಗಿ S-400 ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಹೊಡೆದುರುಳಿಸಿದೆ. ಈ ಬಗ್ಗೆ ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ.
ಶ್ರೀನಗರ, ಜಮ್ಮು, ಬಟಿಂಡಾ, ಚಂಡೀಗಢ, ಪಠಾಣ್ ಕೋಟ್, ಆವಂತಿಪೂರಾ, ಲೂಧಿಯಾನಾ, ಅಮೃತಸರ, ನಲ್, ಫಲೋಡೆ, ಉತ್ತರಲೈ, ಬುಚ್, ಕಪೂರ್ತಲಾ, ಜಲಂದರ್, ಆದಂಪುರ ಸೇರಿದಂತೆ ಭಾರತದ 15 ನಗರಗಳನ್ನು ಗುರಿಯಾಗಿಸಿ ದಾಳಿಗೆ ಯತ್ನಿಸಿತ್ತು. ಆದರೆ ಭಾರತೀಯ ಸೇನೆ ಪಾಕ್ ದಾಳಿಯನ್ನು ವಿಫಲಗೊಳಿಸಿದೆ.