ಹೇರ್ ಕಲರಿಂಗ್ ಮಾಡುವ ಮುನ್ನ ಇರಲಿ ಈ ಎಚ್ಚರ….!

ಕೂದಲಿಗೆ ಕಲರ್ ಮಾಡುವುದು ಈಗ ಸಾಮಾನ್ಯ ಸಂಗತಿ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಫ್ಯಾಷನ್ ಜೊತೆಗೆ ಅನಿವಾರ್ಯವಾಗಿದೆ. ಬದಲಾದ ಜೀವನ ಶೈಲಿಯಿಂದಾಗಿ ಕೂದಲು ಬಣ್ಣ ಕಳೆದುಕೊಳ್ಳುತ್ತಿದೆ. ಅನಾರೋಗ್ಯ ಕೂದಲನ್ನು ಸುಂದರವಾಗಿಸಲು ಜನರು ಕೂದಲಿಗೆ ಬಣ್ಣ ಬಳಿದುಕೊಳ್ಳುತ್ತಿದ್ದಾರೆ.

ನಿಮ್ಮ ಕೂದಲು ಉದುರುತ್ತಿದ್ದರೆ, ಅಲರ್ಜಿ ಸಮಸ್ಯೆ ನಿಮಗಿದ್ದರೆ ಅಥವಾ ತಲೆ ಹೊಟ್ಟು ಹೆಚ್ಚಾಗಿದ್ದರೆ ಇದನ್ನು ಮುಚ್ಚಿಕೊಳ್ಳಲು ಬಣ್ಣ ಹಾಕಬೇಡಿ. ಮೊದಲು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಕೂದಲಿಗೆ ಬಣ್ಣ ಹಚ್ಚಿಕೊಂಡರೆ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ.

ನಿಮ್ಮ ಮುಖ ಹಾಗೂ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು ಬಣ್ಣ ಹಚ್ಚಿಕೊಳ್ಳಿ. ನೀವು ಕೆಲಸ ಮಾಡುತ್ತಿದ್ದರೆ ಅದನ್ನೂ ನೆನಪಿನಲ್ಲಿಟ್ಟುಕೊಳ್ಳಿ. ನೀವು ಕೂದಲಿಗೆ ಹಚ್ಚಿಕೊಳ್ಳುವ ಬಣ್ಣ ನಿಮ್ಮ ಸೌಂದರ್ಯ ಹೆಚ್ಚಿಸಬೇಕು. ಮುಜುಗರಕ್ಕೊಳಗಾಗುವಂತೆ ಮಾಡಬಾರದು ನೆನಪಿರಲಿ.

ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದರಿಂದ ಕೆಲವರಿಗೆ ತಲೆನೋವು ಕಾಡಲು ಶುರುವಾಗುತ್ತದೆ. ಮತ್ತೆ ಕೆಲವರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಕಲರ್ ಮಾಡುವ ಮೊದಲು ತಜ್ಞರಿಂದ ಅಭಿಪ್ರಾಯ ಪಡೆಯುವುದು ಸೂಕ್ತ.

ಮೊದಲ ಬಾರಿ ಕಲರಿಂಗ್ ಮಾಡುವ ಮೊದಲು ಒಳ್ಳೆ ಬ್ಯೂಟಿ ಪಾರ್ಲರ್, ಸಲೂನ್ ಗೆ ಹೋಗಿ.

ಕೂದಲಿಗೆ ಕಲರಿಂಗ್ ಮಾಡುವ ಮೊದಲು ಮೆಹಂದಿಯನ್ನು ಹಚ್ಚಬೇಡಿ.

ನೀವೇ ಕಲರ್ ಮಾಡಿಕೊಳ್ಳುವುದಾದಲ್ಲಿ ಪ್ಯಾಕೆಟ್ ಮೇಲಿರುವ ಸಂದೇಶವನ್ನು ಸರಿಯಾಗಿ ಓದಿ. ಹಾಗೆ ನಿಯಮ ಪಾಲಿಸಿ ಅಲ್ಲಿ ಹೇಳಿದಂತೆ ಬಣ್ಣ ಹಚ್ಚಿಕೊಳ್ಳಿ.

ವಾರಕ್ಕೆ ಎರಡು ಬಾರಿ ಎಣ್ಣೆ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆ ಬಿಟ್ಟು ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read