ಒಂದು ಕಪ್ ಟೀ ಗೆ 340 ರೂ.: ತಮಿಳುನಾಡಿಗಿಂತ ಪಶ್ಚಿಮ ಬಂಗಾಳದಲ್ಲಿ ಹಣದುಬ್ಬರ ಹೆಚ್ಚಾಗಿದೆ ಎಂದ ಚಿದಂಬರಂ

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಚಹಾದ ಬೆಲೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಭಾರತದ ವಿವಿಧ ಭಾಗಗಳಲ್ಲಿ ಹಣದುಬ್ಬರದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. X ನಲ್ಲಿನ ಪೋಸ್ಟ್‌ ನಲ್ಲಿ ಚಿದಂಬರಂ ಅವರು, ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಒಂದು ಕಪ್ ಬಿಸಿನೀರು ಮತ್ತು ಟೀ ಬ್ಯಾಗ್‌ ನಿಂದ ಮಾಡಿದ ಸರಳ ಚಹಾಕ್ಕೆ 340 ರೂ. ಪಡೆದಿದ್ದಕ್ಕಾಗಿ ತಮ್ಮ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಹಣದುಬ್ಬರವು ತಮಿಳುನಾಡಿಗಿಂತ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

ತಮಿಳುನಾಡಿನ ರಾಜ್ಯಸಭಾ ಸಂಸದ ಚಿದಂಬರಂ ಅವರು ಈ ಘಟನೆಯನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಹಿಂದಿನ ಅನುಭವಕ್ಕೆ ಲಿಂಕ್ ಮಾಡಿದ್ದಾರೆ. ಅಲ್ಲಿ ಅವರು ಅದೇ ರೀತಿಯ ಒಂದು ಕಪ್ ಬಿಸಿ ನೀರು ಟೀ ಬ್ಯಾಗ್ ಗೆ 80 ರೂ. ಬಿಲ್ ಕೊಟ್ಟಿದ್ದನ್ನು ಸ್ಮರಿಸಿದ್ದಾರೆ.

ಒಂದೆರಡು ವರ್ಷಗಳ ಹಿಂದೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ‘ಬಿಸಿನೀರು ಮತ್ತು ಟೀ ಬ್ಯಾಗ್’ ಬೆಲೆ 80 ರೂಪಾಯಿ ಇತ್ತು. ನಾನು ಅದರ ಬಗ್ಗೆ ಟ್ವೀಟ್ ಮಾಡಿದ ನಂತ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) ಗಮನಿಸಿ ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ತಿಳಿಸಿದ್ದಾರೆ.

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಿಸಿನೀರು ಮತ್ತು ಟೀ ಬ್ಯಾಗ್‌ನಿಂದ ತಯಾರಿಸಿದ ಚಹಾದ ಬೆಲೆ 340 ರೂಪಾಯಿ ಇದೆ. ತಮಿಳುನಾಡಿಗಿಂತ ಪಶ್ಚಿಮ ಬಂಗಾಳದಲ್ಲಿ ಹಣದುಬ್ಬರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

https://twitter.com/PChidambaram_IN/status/1834575168225542246

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read