BIG NEWS: ದೆಹಲಿಯಲ್ಲಿ ರಾಜ್ಯ ಬಿಜೆಪಿ ರಾಜಕೀಯ; ಉಭಯ ಬಣಗಳಿಂದ ಬಿರುಸಿನ ಚಟುವಟಿಕೆ

ರಾಜ್ಯದ ಬಿಜೆಪಿಯಲ್ಲಿ ಬಿನ್ನಮತ ಭುಗಿಲೆದ್ದಿದ್ದು, ವಿಜಯೇಂದ್ರ ಮತ್ತು ಯತ್ನಾಳ್ ಹಾಗೂ ತಟಸ್ಥ ಬಣದ ಹಾಲಿ ಮತ್ತು ಮಾಜಿ ನಾಯಕರುಗಳು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.

ಬಿಜೆಪಿಯ ಕೇಂದ್ರದ ನಾಯಕರು ದೆಹಲಿ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿಯ ಭಿನ್ನಮತ ಶಮನಕ್ಕೆ ಯಾವುದೇ ರೀತಿಯ ಪ್ರಯತ್ನ ಕೈಗೊಂಡಿರಲಿಲ್ಲ.

ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗ ಸಮರ ಜೋರಾಗಿದೆ. ರೆಬಲ್ ತಂಡ ಮತ್ತು ವಿಜಯೇಂದ್ರ ಅವರು ದೆಹಲಿಯಲ್ಲಿ ತಮ್ಮ ವಾಸ್ತವ್ಯ ಹೂಡಿದ್ದು ಮತ್ತಷ್ಟು ಕುತೂಹಲಗಳಿಗೆ ಕಾರಣವಾಗಿದೆ.

ರೆಬಲ್ಸ್ ನಾಯಕರು ದೆಹಲಿಯ ವಿ. ಸೋಮಣ್ಣ ಅವರ ನಿವಾಸದಲ್ಲಿ ಸಭೆಯನ್ನು ನಡೆಸುತ್ತಿದ್ದು. ವಿಜಯೇಂದ್ರ ವಿರುದ್ದ ಮತ್ತೊಂದು ಸುತ್ತಿನ ದೂರು ನೀಡಲು ಯತ್ನಾಳ್‌ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಸದ್ಯದ ಪರಿಸ್ಥಿತಿ ಗಮನಿಸಿದರೆ ಬಿಜೆಪಿಯ ಹೈ ಕಮಾಂಡ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ತಾರ್ಕಿಕ ಅಂತ್ಯ ಹೇಳುವ ಎಲ್ಲ ಲಕ್ಷಣ ಕಂಡಬರುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read