ಕೆಸರು ಮಣ್ಣಿನಲ್ಲಿ ಐಎಎಸ್​ ಅಧಿಕಾರಿಗಳ ಸಂಭ್ರಮದ ಬಣ್ಣದೋಕುಳಿ

ಇಂದೋರ್ (ಮಧ್ಯಪ್ರದೇಶ): ಇಂದೋರ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಇಳಯರಾಜ ಟಿ ಮತ್ತು ವಿಭಾಗೀಯ ಆಯುಕ್ತ ಡಾ. ಪವನ್ ಶರ್ಮಾ ಅವರ ನಿವಾಸದಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಇಬ್ಬರೂ ಐಎಎಸ್ ಅಧಿಕಾರಿಗಳು ಕೆಸರುಗದ್ದೆ ಹೋಳಿ ಆಡಿದರು. ಮೊದಲ ಸಂಭ್ರಮಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಇಳಯರಾಜ ಟಿ ಅವರ ನಿವಾಸದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾಡಳಿತದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.

ನಂತರ ವಿಭಾಗೀಯ ಆಯುಕ್ತ ಡಾ.ಪವನ್ ಶರ್ಮಾ ಅವರು ಆಗಮಿಸಿ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡೋಲು ಬಡಿತದಲ್ಲಿ ಅಧಿಕಾರಿಗಳು ಒಟ್ಟಾಗಿ ನೃತ್ಯ ಪ್ರದರ್ಶಿಸಿದರು. ತರುವಾಯ ವಿಭಾಗೀಯ ಆಯುಕ್ತ ಡಾ. ಶರ್ಮಾ ಅವರ ಬಂಗಲೆಯಲ್ಲಿ ಹೋಳಿ ಆಯೋಜಿಸಲಾಯಿತು, ಅಲ್ಲಿ ವಿಶೇಷವಾಗಿ ಮಣ್ಣಿನ ಹೋಳಿ ಆಡಲು ವ್ಯವಸ್ಥೆ ಮಾಡಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read