ಸಣ್ಣ ವಯಸ್ಸಿನಲ್ಲೇ ಅದ್ಭುತ ಕ್ರಿಕೆಟಿಂಗ್ ಕೌಶಲ್ಯದಿಂದ ಗಮನ ಸೆಳೆಯುವ ಬಾಲಕರ ಅನೇಕ ವಿಡಿಯೋಗಳನ್ನು ನಾವೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ನೋಡಿದ್ದೇವೆ.
ಬಾಲಕರ ಗುಂಪೊಂದು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಮುನಾಫ್ ಪಟೇಲ್.
ತನ್ನ ಅದ್ಭುತ ಲೈನ್ ಮತ್ತು ಲೆಂಗ್ತ್‌ನಿಂದ ಬ್ಯಾಟರ್‌ನನ್ನು ಕ್ಲೀನ್ ಬೌಲ್ಡ್ ಮಾಡುವ ಬಾಲಕನನ್ನು ಮೆಚ್ಚಿಕೊಂಡಿರುವ ವಿಶ್ವಕಪ್ ವಿಜೇತ ವೇಗಿ,” ಈ ಬಾಲಕನ ಬಗ್ಗೆ ಏನು ಹೇಳುವುದು? ವೇಗದ ಆವಿಷ್ಕಾರ,” ಎಂದು ಹೇಳಿದ್ದಾರೆ.
13 ಟೆಸ್ಟ್ ಹಾಗೂ 70 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮುನಾಫ್ ಪಟೇಲ್, ಎರಡೂ ಬಗೆಯ ಕ್ರಿಕೆಟ್‌ನಲ್ಲಿ ಕ್ರಮವಾಗಿ 35 ಹಾಗೂ 86 ವಿಕೆಟ್‌ಗಳನ್ನು ಪಡೆದಿದ್ದಾರೆ.
https://twitter.com/munafpa99881129/status/1643761090134945792?ref_src=twsrc%5Etfw%7Ctwcamp%5Etweetembed%7Ctwte