ಕುತೂಹಲಕ್ಕೆ ಕಾರಣವಾಗಿದೆ ರಾಹುಲ್‌ ಗಾಂಧಿ ಫೋಟೋ ಇರುವ ಮದುವೆ ಆಮಂತ್ರಣ ಪತ್ರಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರ ಹಸನ್ಮುಖಿ ಚಿತ್ರದ ವಿವಾಹ ಆಮಂತ್ರಣ ಪತ್ರವೊಂದು ಸದ್ದು ಮಾಡುತ್ತಿದ್ದು, ಕೊನೆಗೂ ಅವರು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳನ್ನು ಹಬ್ಬಿಸಿದೆ.

ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಹೊಂದಿರುವ ಈ ಆಮಂತ್ರಣ ಪತ್ರದಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿಯವರ ಚಿತ್ರಗಳನ್ನು ದೊಡ್ಡದಾಗಿ ಹಾಕಲಾಗಿದೆ.

ತಮಿಳುನಾಡಿದ ಮಾಜಿ ಮುಖ್ಯಮಂತ್ರಿ ಕೆ ಕಾಮರಾಜರ್‌ಗೆ ಅರ್ಪಿತವಾಗಿರುವ ಈ ಆಮಂತ್ರಣ ಪತ್ರವು ತಮಿಳು ನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆಎಸ್‌ ಆಳಗಿರಿರ ಪುತ್ರಿ ಕಾಂಚನಾ ಹಾಗೂ ಅವರ ಭಾವಿ ಪತಿ ವಿನೋದ್‌ ರಂಗನಾಥ್‌ರ ಮದುವೆಯದ್ದಾಗಿದೆ.

ಆಮಂತ್ರಣ ಪತ್ರದ ಮೊದಲ ಪುಟದಲ್ಲಿ ರಾಹುಲ್‌ ಗಾಂಧಿರ ದೊಡ್ಡ ಚಿತ್ರವಿದ್ದು, ಅದರ ಕೆಳಗೆ ಆಳಗಿರಿಯವರ ಚಿಕ್ಕದೊಂದು ಚಿತ್ರವಿದೆ.

ಮೇಲುನೋಟಕ್ಕೆ ಮದುವೆ ಆಮಂತ್ರಣಕ್ಕಿಂತಲೂ ಇದೊಂದು ರಾಜಕೀಯ ಕಾರ್ಯಕ್ರಮವೊಂದರ ಆಮಂತ್ರಣ ಪತ್ರದಂತೆ ಕಾಣುತ್ತಿದೆ.

2nd page of the wedding invitation

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read