ಅಬ್ಬಬ್ಬಾ….! ತಲೆ ತಿರುಗಿಸುವಂತಿದೆ ‘ಐಟಂ ಸಾಂಗ್’ ಗೆ ಈ ನಟಿ ಪಡೆದಿರುವ ಸಂಭಾವನೆ

ಭಾರತೀಯ ಚಲನಚಿತ್ರಗಳಲ್ಲಿ ಹಾಡುಗಳಿಗೆ ಸಾಕಷ್ಟು ಪ್ರಾಧ್ಯಾನತೆ ನೀಡಲಾಗುತ್ತದೆ. ಹಾಡುಗಳ ಚಿತ್ರೀಕರಣಕ್ಕಾಗಿಯೇ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಜೊತೆಗೆ ಜಗತ್ತಿನ ಸುಂದರ ತಾಣಗಳಲ್ಲಿ ಇದರ ಚಿತ್ರೀಕರಣ ನಡೆಸಲಾಗುತ್ತದೆ.

ಈ ಹಿಂದೆ ಪ್ರೇಕ್ಷಕರನ್ನು ಆಕರ್ಷಿಸಲು ಐಟಂ ಸಾಂಗ್ ಹಾಕುತ್ತಿದ್ದು, ಹೆಲೆನ್, ಸಿಲ್ಕ್ ಸ್ಮಿತಾ, ಜಯಮಾಲಿನಿ ಮೊದಲಾದವರು ಈ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಖ್ಯಾತ ನಟಿಯರೇ ಐಟಂ ಸಾಂಗ್ ಗಳಲ್ಲಿ ಮಿಂಚುತ್ತಿದ್ದಾರೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ‘ಪುಷ್ಪಾ ದಿ ರೈಸ್’ ಭರ್ಜರಿ ಯಶಸ್ಸು ಗಳಿಸಿದ್ದು, ಇದರ ಸೆಕೆಂಡ್ ಪಾರ್ಟ್ ಚಿತ್ರೀಕರಣ ಭರದಿಂದ ಸಾಗಿದೆ. ‘ಪುಷ್ಪಾ ದಿ ರೈಸ್’ ಚಿತ್ರದಲ್ಲಿ ‘ಊಂ ಅಂಟವಾ’ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಸಮಂತಾ ರುತ್ ಪ್ರಭು ಇದಕ್ಕಾಗಿ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅಚ್ಚರಿ ಸಂಗತಿ ಎಂದರೆ ನಾಯಕಿ ನಟಿಯಾಗಿದ್ದ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಟಿಸಲು ಪಡೆದಿದ್ದು ಎರಡು ಕೋಟಿ ರೂಪಾಯಿಗಳಂತೆ.

ಐಟಂ ಸಾಂಗ್ ಒಂದಕ್ಕೆ ಸಮಂತಾ ರುತ್ ಪ್ರಭು ಪಡೆದಿರುವ ಸಂಭಾವನೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಎಂದು ಹೇಳಲಾಗುತ್ತಿದ್ದು, ನೋರಾ ಫತೇಹಿ ಹಾಗೂ ಸನ್ನಿ ಲಿಯೋನ್ ಐಟಂ ಸಾಂಗ್ ಒಂದಕ್ಕೆ ಎರಡು ಕೋಟಿ ರೂಪಾಯಿ ಪಡೆಯುತ್ತಾರೆ. ಇನ್ನು ಒಂದು ಕಾಲದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದ್ದ ಮಲೈಕಾ ಅರೋರ 50 ಲಕ್ಷದಿಂದ 1 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆದಿದ್ದರಂತೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read