ನಾಗರಿಕ ವಿಮಾನಯಾನ ಸಚಿವಾಲಯದ ಕ್ರಾಂತಿಕಾರಿ ಹೆಜ್ಜೆ : ಭಾರತದ ಮೊದಲ ʻಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆʼಗಳು ಆರಂಭ

ನವದೆಹಲಿ :  ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಭಾರತದಲ್ಲಿ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಗಳ (ಎಚ್ಇಎಂಎಸ್) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ.

ಭಾರತದ ಮೊದಲ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ (ಎಚ್ಇಎಂಎಸ್) ಉತ್ತರಾಖಂಡದಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಹೃಷಿಕೇಶದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಹೆಲಿಪ್ಯಾಡ್ನಲ್ಲಿ ಒಂದು ವರ್ಷದ ಅವಧಿಗೆ ಏರ್ ಆಂಬ್ಯುಲೆನ್ಸ್ ಲಭ್ಯವಿರುತ್ತದೆ. ಹೆಲಿಕಾಪ್ಟರ್ ಸ್ಟ್ರೆಚರ್ ಮತ್ತು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸಾಗಿಸುತ್ತದೆ. ಇದು ಒಬ್ಬ ರೋಗಿಯನ್ನು ಒಂದರಿಂದ ಇಬ್ಬರು ವೈದ್ಯಕೀಯ ಸಿಬ್ಬಂದಿಯೊಂದಿಗೆ 100 ನಾಟಿಕಲ್ ಮೈಲಿ ದೂರದವರೆಗೆ ಸಾಗಿಸಲು ಅನುಕೂಲ ಮಾಡಿಕೊಡುತ್ತದೆ. ಒಡಿಶಾ ಮತ್ತು ಮಧ್ಯಪ್ರದೇಶ ಕೂಡ ಇದೇ ರೀತಿಯ ಸೇವೆಗಳಲ್ಲಿ ಆಸಕ್ತಿ ತೋರಿಸುತ್ತಿವೆ ಎಂದು ತಿಳಿಸಿದ್ದಾರೆ.

ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ ಎಂದರೇನು?

ಈ ಹೆಲಿಕಾಪ್ಟರ್ ಅನ್ನು ಹೃಷಿಕೇಶದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಲ್ಲಿ ನಿಲ್ಲಿಸಲಾಗುವುದು, ಅಲ್ಲಿಂದ 150 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಕಳುಹಿಸಬಹುದು. ಇದರಿಂದ ಅಪಘಾತದಲ್ಲಿ ಗಾಯಗೊಂಡ ಯಾವುದೇ ವ್ಯಕ್ತಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read