ಇದೇ ಮೊದಲ ಬಾರಿಗೆ ಭಾರತದಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಅಂಚೆ ಕಚೇರಿಯನ್ನು ಬೆಂಗಳೂರಲ್ಲಿ ನಿರ್ಮಿಸಲಾಗುತ್ತಿದೆ.
ಕಟ್ಟಡ ನಿರ್ಮಾಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಹಲಸೂರಿನಲ್ಲಿ ಲಾರ್ಸನ್ ಅಂಡ್ ಟೂಬ್ರೊ ಕನ್‌ಸ್ಟ್ರಕ್ಷನ್ 45 ದಿನಗಳಲ್ಲಿ 23 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿದೆ.
ಈ ತಂತ್ರಜ್ಞಾನವನ್ನು ಮೊದಲು ಮನೆಗಳು ಮತ್ತು ಇತರ ರಚನೆಗಳನ್ನು ನಿರ್ಮಿಸಲು ಬಳಸಲಾಗಿದ್ದರೂ, ಅಂಚೆ ಕಚೇರಿಗಳನ್ನು ನಿರ್ಮಿಸಲು ಇದೇ ಮೊದಲ ಬಾರಿಗೆ ಬಳಸಲಾಗ್ತಿದೆ.
ಸದ್ಯ ಕಟ್ಟಡ ನಿರ್ಮಾಣವು ಸಾಕಷ್ಟು ವೇಗವಾಗಿ ಸಾಗುತ್ತಿದ್ದು ಕಾಮಗಾರಿ ಪೂರ್ಣಗೊಂಡ ನಂತರ 3D ರಚನೆಯು ಬಹುಶಃ ಬೆಂಗಳೂರಿನಲ್ಲಿ ಒಂದು ಹೆಗ್ಗುರುತಾಗಲಿದೆ.
ಯೋಜನೆಯ ವೀಡಿಯೋವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ಮೊದಲ ಬಾರಿಗೆ, 3D ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಪೋಸ್ಟ್ ಆಫೀಸ್ ಅನ್ನು ನಿರ್ಮಿಸಲಾಗುತ್ತಿದೆ. ಹಲಸೂರು ಬಜಾರ್ ಪೋಸ್ಟ್ ಆಫೀಸ್” ಎಂದು ಹೇಳಿದ್ದಾರೆ.
https://twitter.com/MarishaThakur/status/1643899117717061638?ref_src=twsrc%5Etfw%7Ctwcamp%5Etweetembed%7Ctwterm%5E1643899117717061638%7Ctwgr%5E385d0f110e7bfe0e82996c33db0e41ff0287b3ac%7Ctwcon%5Es1_&ref_url=https%3A%2F%2Flifestyle.livemint.com%2Fsmart-living%2Finnovation%2Findias-first-3d-printed-post-office-to-come-up-in-bengaluru-111681382811292.html