ವರನ ಮದುವೆ ಮೆರವಣಿಗೆಯಲ್ಲಿ ಶಬ್ಧವಿಲ್ಲದೇ ನೃತ್ಯದ ಸಂಭ್ರಮ; ಹೆಡ್ ಫೋನ್ ಬಳಸಿ ಕುಣಿದ ವಿಡಿಯೋ ವೈರಲ್

ಭಾರತದಲ್ಲಿ ಸಾಂಪ್ರದಾಯಿಕ ಮದುವೆಗಳು ಭಾರೀ ಸದ್ದಿನಿಂದಲೇ ನಡೆಯುತ್ತವೆ. ವರ – ವಧುವಿನ ಮೆರವಣಿಗೆ ವೇಳೆ ಅದ್ಧೂರಿ ಆಚರಣೆ, ಜೋರು ಧ್ವನಿಯಲ್ಲಿ ಹಾಡು ಹಾಕಿ ನೃತ್ಯ ಮಾಡುವುದು ಸೇರಿದಂತೆ ಸದ್ದು ಗದ್ದಲದಲ್ಲೇ ಮದುವೆ ಸಂಭ್ರಮಗಳು ಜರುಗುತ್ತವೆ. ಆದರೆ ಕಾಲ ಬದಲಾದಂತೆ ಮದುವೆ ಆಚರಣೆಯಲ್ಲೂ ಬದಲಾವಣೆಗಳಾಗ್ತಿವೆ.

ಅದೇನೆಂದರೆ ಆ ಮದುವೆ ಮೆರವಣಿಗೆಯಲ್ಲಿ ಹಾಡು, ನೃತ್ಯ, ಸಂಭ್ರಮ ಎಲ್ಲವೂ ಇತ್ತು, ಆದರೆ ಸದ್ದು ಮಾತ್ರ ಇರಲಿಲ್ಲ. ಅರೆ ! ಇದು ಹೇಗೆ ಸಾಧ್ಯ ಎಂದು ಯೋಚಿಸಿದರೆ, ಅದನ್ನು ಸಾಧ್ಯವಾಗಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಇದರಲ್ಲಿ ಮದುವೆ ಸಂಭ್ರಮದಲ್ಲಿ ವರನ ಮೆರವಣಿಗೆ ನಡೆಯುತ್ತಿರುತ್ತದೆ.

ಈ ವೇಳೆ ಹಾಡಿಗೆ ಮೆರವಣಿಗೆಯಲ್ಲಿದ್ದವರು ನೃತ್ಯ ಮಾಡುತ್ತಿರುತ್ತಾರೆ. ಆದರೆ ಅವರೆಲ್ಲ ಹಾಡು ಕೇಳಲು ಹೆಡ್‌ಫೋನ್‌ಗಳನ್ನು ಬಳಸಿದ್ದು ಯಾವುದೇ ಶಬ್ದವಿಲ್ಲದೆ ನೃತ್ಯ ಮಾಡಿದ್ದಾರೆ. ಈ ಹೊಸ ಮತ್ತು ವಿಭಿನ್ನ ಪ್ರಯತ್ನದ ವಿಡಿಯೋ “ಹೊಸ ಯುಗದ ಮೌನ ಮೆರವಣಿಗೆ” ಎಂದು ಗಮನ ಸೆಳೆದಿದ್ದು ವೈರಲ್ ಆಗ್ತಿದೆ.

ಇದುವರೆಗೆ ಈ ವಿಡಿಯೋ 19 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ಕೆಲವರು ವಿನೂತನ ಪ್ರಯತ್ನವನ್ನು ಹುರಿದುಂಬಿಸಿದರೆ, ಇತರರು ಅಂತಹ ಮೆರವಣಿಗೆಯಲ್ಲಿ ಆಸಕ್ತಿ ಇಲ್ಲ ಎಂದಿದ್ದಾರೆ. “ಡ್ಯೂಡ್….. ಇದು ಒಳ್ಳೆಯ ಐಡಿಯಾ….. ಬೇರೆಯವರಿಗೆ ಇದು ಡಿಸ್ಟರ್ಬ್ ಮಾಡುವುದಿಲ್ಲ” ಎಂದು ಪ್ರಶಂಸಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read