ನವದೆಹಲಿ: ಪ್ರಯಾಣಿಕರ ಹೆಚ್ಚಿನ ಜನಸಂದಣಿಯನ್ನು ಪರಿಗಣಿಸಿ, ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಏಳು ಕಾರ್ಯಾಚರಣಾ ಮಾರ್ಗಗಳಲ್ಲಿ ಹೆಚ್ಚಿನ ಬೋಗಿಗಳೊಂದಿಗೆ ಮೇಲ್ದರ್ಜೆಗೇರಿಸುವುದಾಗಿ ಭಾರತೀಯ ರೈಲ್ವೆ ಹೇಳಿದೆ. ಇದರಿಂದ ರೈಲು ಪ್ರಯಾಣಿಕರು ಹೆಚ್ಚಿನ ಸೌಕರ್ಯ ಸಿಗಲಿದೆ.
ಪ್ರಸ್ತುತ ನಾಲ್ಕು 8 ಬೋಗಿಗಳು (ಕಾರ್ ಗಳು ಎಂದೂ ಕರೆಯುತ್ತಾರೆ) ಮತ್ತು ಮೂರು 16 ಬೋಗಿಗಳ ವಂದೇ ಭಾರತ್ ರೈಲುಗಳು ಈ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಭಾರತೀಯ ರೈಲ್ವೆ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
16 ಬೋಗಿಗಳ ರೈಲನ್ನು 20 ಬೋಗಿಗಳಿಗೆ ಮೇಲ್ದರ್ಜೆಗೇರಿಸಲಾಗುವುದು ಮತ್ತು 8 ಬೋಗಿಗಳನ್ನು ಹೊಂದಿರುವ ರೈಲನ್ನು 16 ಬೋಗಿಗಳಿಗೆ ಹೆಚ್ಚಿಸಲಾಗುವುದು ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರದ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.
2025-26ರ ಹಣಕಾಸು ವರ್ಷಕ್ಕೆ(31.07.2025 ರವರೆಗೆ) ಆಕ್ಯುಪೆನ್ಸಿ ಮತ್ತು ವೃದ್ಧಿಗೆ ಸಾಧ್ಯತೆಯ ಆಧಾರದ ಮೇಲೆ, 20-ಬೋಗಿಗಳನ್ನು ಹೊಂದಿರುವ ಮೂರು 16-ಬೋಗಿಗಳ ವಂದೇ ಭಾರತ್ ರೈಲು ಸೇವೆಗಳು ಮತ್ತು 16-ಬೋಗಿಗಳನ್ನು ಹೊಂದಿರುವ ನಾಲ್ಕು 8-ಬೋಗಿಗಳ ವಂದೇ ಭಾರತ್ ರೈಲು ಸೇವೆಗಳ ತಾತ್ಕಾಲಿಕ ವೃದ್ಧಿಯನ್ನು ಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಹೊಸ ನವೀಕರಣಗಳು: 7 ಮಾರ್ಗಗಳ ಪರಿಶೀಲನಾ ಪಟ್ಟಿ
ಈ ಏಳು ಮಾರ್ಗಗಳು ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್, ಸಿಕಂದರಾಬಾದ್-ತಿರುಪತಿ, ಚೆನ್ನೈ ಎಗ್ಮೋರ್-ತಿರುನೆಲ್ವೇಲಿ, ಮಧುರೈ-ಬೆಂಗಳೂರು ಕಂಟೋನ್ಮೆಂಟ್, ದಿಯೋಘರ್-ವಾರಣಾಸಿ, ಹೌರಾ-ರೂರ್ಕೆಲಾ ಮತ್ತು ಇಂದೋರ್-ನಾಗ್ಪುರ. ಬಿಡುಗಡೆಯಾದ ರೈಲುಗಳನ್ನು ಇತರ ಕೆಲವು ಹೊಸ ಮಾರ್ಗಗಳಲ್ಲಿಯೂ ಪರಿಚಯಿಸಲಾಗುವುದು.
ಶೀಘ್ರದಲ್ಲೇ 20-ಬೋಗಿಗಳ ವಂದೇ ಭಾರತ್ ರೈಲುಗಳು ಬಿಡುಗಡೆ
ಈ ನವೀಕರಣಗಳ ಜೊತೆಗೆ, 20-ಬೋಗಿಗಳ ವಂದೇ ಭಾರತ್ ರೈಲುಗಳು ಬಿಡುಗಡೆಯಾಗಲಿವೆ ಮತ್ತು ಒಂದು 16-ಬೋಗಿಗಳ ರೈಲು ವೃದ್ಧಿಗೆ ಲಭ್ಯವಿರುತ್ತದೆ ಎಂದು ರೈಲ್ವೆ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಗದಿತ ಮೇಲ್ದರ್ಜೆ ಪ್ರಕಾರ, ಪ್ರಸ್ತುತ 16-ಕಾರುಗಳ ವಂದೇ ಭಾರತ್ ಹೊಂದಿರುವ ಮೂರು ಮಾರ್ಗಗಳು – ಮಂಗಳೂರು ಸೆಂಟ್ರಲ್ – ತಿರುವನಂತಪುರಂ ಸೆಂಟ್ರಲ್, ಸಿಕಂದರಾಬಾದ್ – ತಿರುಪತಿ, ಚೆನ್ನೈ ಎಗ್ಮೋರ್ – ತಿರುನಲ್ವೇಲಿ. ಇವನ್ನು 20-ಕಾರುಗಳಿಗೆ ಮೇಲ್ದರ್ಜೆಗೇರಿಸಲಾಗುವುದು.