ಭಾರತೀಯ ಮೂಲದ ವ್ಯಕ್ತಿ ಮದುವೆ ನಂತರ ಈ ದೇಶದ ಸರ್ಕಾರ ನೀಡಿದೆ 1 ಲಕ್ಷ ರೂಪಾಯಿಗೂ ಅಧಿಕ ಹಣ…! ಇದರ ಹಿಂದಿದೆ ಈ ಕಾರಣ

ಮುಂಬೈ ಮೂಲದ ಟ್ರಾವೆಲ್ ಬ್ಲಾಗರ್ ಮಿಥಿಲೇಶ್ ಅವರು ಬೆಲಾರಸ್‌ನ ಲಿಸಾ ಅವರನ್ನು ವಿವಾಹವಾಗಿದ್ದು ದಂಪತಿಗಳು ಸಂತಾನ ಪಡೆದ ಬಳಿಕ ಅವರಿಗೆ ಬನಾರಸ್ ಸರ್ಕಾರ ಹಣ ನೀಡಿದೆ. ಇದು ಯಾಕೆ ಗೊತ್ತಾ?

ಮಗುವಿನ ಪೋಷಣೆಗಾಗಿ ಬೆಲಾರಸ್ ಸರ್ಕಾರದಿಂದ ಸಾಕಷ್ಟು ಮೊತ್ತವನ್ನು ಪಡೆದಿದ್ದೇನೆ ಎಂದು ಮಿಥಿಲೇಶ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಒಂದೇ ಕಂತಿನಲ್ಲಿ 1 ಲಕ್ಷದ 28 ಸಾವಿರ ರೂ.ಗಳನ್ನು ಪಡೆದಿದ್ದಾರೆ. ಮುಂದಿನ ಮೂರು ವರ್ಷಗಳವರೆಗೆ ಪ್ರತಿ ತಿಂಗಳು 18,000 ರೂ.ಗಳನ್ನು ಪಡೆಯುತ್ತಾರೆ. ಅದು ನೇರವಾಗಿ ಅವರ ಖಾತೆಗೆ ವರ್ಗಾಯಿಸಲ್ಪಡುತ್ತದೆ. ಆದಾಗ್ಯೂ ಈ ಮೊತ್ತವು ಬೆಲಾರಸ್ನಲ್ಲಿ ವಾಸಿಸುವವರಿಗೆ ಮಾತ್ರ ಲಭ್ಯವಿದೆ.

ಮಿಥಿಲೇಶ್ ಅವರ ಪತ್ನಿ ಲೀಸಾಗೆ ಸಾಮಾನ್ಯ ಹೆರಿಗೆಯಾಗಿದ್ದು ಮಗು ಜನನದ ಸಮಯದಲ್ಲಿ 4 ಕೆಜಿ ತೂಕವಿತ್ತು ಮತ್ತು ಈಗ 2 ತಿಂಗಳಾಗಿದೆ ಎಂದು ಹಂಚಿಕೊಂಡಿದ್ದಾರೆ.

ಮಿಥಿಲೇಶ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದಲ್ಲಿ ತಮ್ಮ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ. ಬೆಲಾರಸ್‌ನಲ್ಲಿ ಸ್ನೇಹಿತನ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಲಿಸಾರನ್ನು ಹೇಗೆ ಭೇಟಿಯಾದರು ಎಂಬುದನ್ನು ಅವರು ವಿವರಿಸಿದ್ದಾರೆ.

ಮಿಥಿಲೇಶ್ ತನ್ನದೇ ಆದ ಯೂಟ್ಯೂಬ್ ಚಾನೆಲ್ (ಮಿಥಿಲೇಶ್ ಬ್ಯಾಕ್‌ಪ್ಯಾಕರ್) ಹೊಂದಿದ್ದು, 9 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ವಾಹಿನಿಯಲ್ಲಿ ತಮ್ಮ ದಿನಚರಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಚಾನೆಲ್‌ನಲ್ಲಿನ ವೀಡಿಯೊವೊಂದರಲ್ಲಿರುವ ಮಾಹಿತಿಯಂತೆ ಅವರು ಮಾರ್ಚ್ 2021 ರಲ್ಲಿ ಮೊದಲ ಬಾರಿಗೆ ರಷ್ಯಾಕ್ಕೆ ಹೋಗಿದ್ದರು. ಬೆಲಾರಸ್‌ ನಲ್ಲಿ ಲಿಸಾಳನ್ನು ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಇಬ್ಬರೂ ಪ್ರೇಮದಲ್ಲಿ ಬಿದ್ದ ಬಳಿಕ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆಯಾದ ವಿಚಾರ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read