ಒಟ್ಟಿಗೆ ಕೆಲಸ ಮಾಡುವವರ ಮದುವೆ: ಇಂಡಿಯನ್ ಆಯಿಲ್‌ನಿಂದ ಮಹತ್ವದ ಹೆಜ್ಜೆ

ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳೆಂದರೆ ಸಂಸ್ಥೆಗಳು ಕೆಂಗಣ್ಣು ಬೀರುವುದು ಸಹಜ. ಕೆಲವು ಸಂಸ್ಥೆಗಳಲ್ಲಿ ಉದ್ದೇಶಪೂರ್ವಕವಾಗಿ ದಂಪತಿಯನ್ನು ಬೇರೆ ಬೇರೆ ಕಡೆ ವರ್ಗಾಯಿಸಲಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಇಂಡಿಯನ್ ಆಯಿಲ್ ಕಂಪೆನಿ ನಡೆದುಕೊಂಡಿದೆ.

ಕಂಪೆನಿಯು ಖುದ್ದಾಗಿ ಜನವರಿಯಲ್ಲಿ ಆಂತರಿಕ ಹೊಂದಾಣಿಕೆ ವೇದಿಕೆಯನ್ನು ಪ್ರಾರಂಭಿದ್ದು, ಸಂಸ್ಥೆಯೊಳಗೆ ತಮ್ಮ ಸಂಗಾತಿಯನ್ನು ಹುಡುಕಲು ಉದ್ಯೋಗಿಗಳನ್ನು ಪ್ರೋತ್ಸಾಹಿಸಿದೆ.

ಇದರ ಮೊದಲ ಹಂತವಾಗಿ ಉದ್ಯೋಗಿಗಳಾದ ಸೀಮಾ ಯಾದವ್ ಮತ್ತು ತರುಣ್ ಬನ್ಸಾಲ್ ಪರಸ್ಪರ ಒಪ್ಪಿಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕಂಪೆನಿಯ ಅಧ್ಯಕ್ಷ ಎಸ್‌ಎಂ ವೈದ್ಯ ಅವರು ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಉದ್ಯೋಗಿಗಳು ಐದು ವರ್ಷಗಳಿಂದ ಕಂಪೆನಿಯ ಭಾಗವಾಗಿದ್ದಾರೆ ಮತ್ತು ಇಬ್ಬರೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

https://twitter.com/ChairmanIOCL/status/1629037239849328640?ref_src=twsrc%5Etfw%7Ctwcamp%5Etweetembed%7Ctw

https://twitter.com/bhakhan/status/1629184955430608897?ref_src=twsrc%5Etfw%7Ctwcamp%5Etweetembed%7Ctwterm%5

https://twitter.com/ChairmanIOCL/status/1629037239849328640?ref_src=twsrc%5Etfw%7Ctwcamp%5Etweetembed%7Ctwterm

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read