ಅದೃಷ್ಟ ಸಂಖ್ಯೆಗಳಾದ ಮಕ್ಕಳ ಜನ್ಮ ದಿನಾಂಕ: ಭಾರತೀಯನಿಗೆ 33 ಕೋಟಿ ರೂ. ಜಾಕ್ ಪಾಟ್

ಅಬುಧಾಬಿ: ಯುಎಇನಲ್ಲಿ ಭಾರತೀಯರೊಬ್ಬರು 33 ಕೋಟಿ ರೂ. ಲಾಟರಿ ಬಹುಮಾನ ಗೆದ್ದಿದ್ದಾರೆ. ಬಿಗ್ ಟಿಕೆಟ್ ನಡೆಸುವ ವಾರದ ಲಾಟರಿ ಡ್ರಾದಲ್ಲಿ ಕೇರಳ ಮೂಲದ ರಾಜೀವ್ ಅರಿಕಾಟ್ ಗೆ ಜಾಕ್ ಪಾಟ್ ಹೊಡೆದಿದೆ.

ಮೊದಲ ಬಹುಮಾನ ಗೆಲ್ಲುವುದರೊಂದಿಗೆ 33 ಕೋಟಿ ರೂ.ಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಐನ್ ನಗರದ ಕಟ್ಟಡ ವಿನ್ಯಾಸ, ನಿರ್ಮಾಣ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, 19 ಜನರೊಂದಿಗೆ ಈ ಹಣ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ರಾಜೀವ್ ಅವರಿಗೆ ಅದೃಷ್ಟ ಖುಲಾಯಿಸಿದ ಲಾಟರಿ ಟಿಕೆಟ್ ಬಿಗ್ ಟಿಕೆಟ್ ವತಿಯಿಂದ ಆಫರ್ ಲೆಕ್ಕದಲ್ಲಿ ಬಂದಿತ್ತು.

ಅಬುಧಾಬಿಯ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ ಅವರ ಮಕ್ಕಳ ಜನ್ಮ ದಿನಾಂಕಗಳು ಅದೃಷ್ಟ ಸಂಖ್ಯೆಗಳಾಗಿ ಹೊರಹೊಮ್ಮಿದವು, ಇದರಿಂದಾಗಿ ಅವರು 15 ಮಿಲಿಯನ್ ದಿರ್ಹಮ್‌ಗಳನ್ನು(ರೂ. 33 ಕೋಟಿ) ಗೆದ್ದರು.

40 ವರ್ಷದ ರಾಜೀವ್ ಅರಿಕಾಟ್ ಉಚಿತ ಟಿಕೆಟ್ ಸಂಖ್ಯೆ 037130 ನೊಂದಿಗೆ ಜಾಕ್‌ಪಾಟ್ ಹೊಡೆದಿದ್ದಾರೆ. ಆರ್ಕಿಟೆಕ್ಚರಲ್ ಡ್ರಾಫ್ಟ್ಸ್‌ಮನ್ ಆಗಿ ಕೆಲಸ ಮಾಡುತ್ತಿರುವ ರಾಜೀವ್ 10 ವರ್ಷಗಳಿಂದ ಅಲ್ ಐನ್‌ನ ನಿವಾಸಿಯಾಗಿದ್ದಾರೆ. “ನಾನು ಕಳೆದ ಮೂರು ವರ್ಷಗಳಿಂದ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೇನೆ, ಆದರೆ ಮೊದಲ ಬಾರಿಗೆ ಗೆದ್ದಿದ್ದೇನೆ” ಎಂದು ಅವರು ತಿಳಿಸಿದರು.

ಅವರ ಇಬ್ಬರು ಮಕ್ಕಳ ಜನ್ಮ ದಿನಾಂಕವಾದ 7 ಮತ್ತು 13 ಸಂಖ್ಯೆಗಳೊಂದಿಗೆ ಟಿಕೆಟ್ ಆಯ್ಕೆ ಮಾಡಲು ಅವರ ಪತ್ನಿ ಸಹಾಯ ಮಾಡಿದರು. ಡ್ರಾದಲ್ಲಿ ಆರು ಟಿಕೆಟ್‌ಗಳನ್ನು ಹೊಂದಿದ್ದರೂ, ಅವರು ಉಚಿತ ಟಿಕೆಟ್ ನಲ್ಲಿ ಗೆದ್ದರು. “ನಾನು ಬಿಗ್ ಟಿಕೆಟ್‌ನಿಂದ ವಿಶೇಷ ಕೊಡುಗೆಯನ್ನು ಪಡೆದುಕೊಂಡಿದ್ದೇನೆ, ನಾನು ಎರಡು ಖರೀದಿಸಿದಾಗ ನಾಲ್ಕು ಟಿಕೆಟ್‌ಗಳನ್ನು ಉಚಿತವಾಗಿ ಪಡೆದುಕೊಂಡಿದ್ದೇನೆ” ಎಂದು ಅವರು ಹೇಳಿದರು.

ಆದಾಗ್ಯೂ ರಾಜೀವ್ ಬಿಗ್ ಟಿಕೆಟ್ ಡ್ರಾದ ಗೆಲುವನ್ನು 19 ಇತರರೊಂದಿಗೆ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ. ಖರೀದಿಸಿದ ಎರಡು ಟಿಕೆಟ್‌ಗಳ ಹಣವನ್ನು ಅವರೆಲ್ಲರೂ ಪಾವತಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read