ಸಾಕು ನಾಯಿ ಮನೆಗೆ ತರಲು ಅತ್ತೆಯಿಂದ ನಿರಾಕರಣೆ; ಮದುವೆಯನ್ನೇ ರದ್ದುಗೊಳಿಸಿದ ವಧು…!

ಪ್ರಸ್ತುತ ದಿನಮಾನಗಳಲ್ಲಿ ಸಣ್ಣಪುಟ್ಟ ಕಾರಣಕ್ಕೆಲ್ಲ ಮದುವೆ ಮುರಿದುಬೀಳುತ್ತಿರುವುದು ಗೊತ್ತಿರುವ ಸಂಗತಿ. ಈಗಾಗಲೇ ಇಂತಹ ಹಲವು ಪ್ರಕರಣಗಳು ನಡೆದಿರುವ ಮಧ್ಯೆ, ಯುವತಿಯೊಬ್ಬಳು ತನ್ನ ಸಾಕು ನಾಯಿಯನ್ನು ಮದುವೆ ಬಳಿಕ ತನ್ನ ಮನೆಗೆ ಕರೆ ತರಲು ಭಾವಿ ಅತ್ತೆ ಒಪ್ಪಿಗೆ ನೀಡಲಿಲ್ಲವೆಂಬ ಕಾರಣಕ್ಕೆನ್ನ ಮದುವೆಯನ್ನೇ ಮುರಿದುಕೊಂಡಿದ್ದಾಳೆ.

ಹೌದು, ಮದುವೆಯ ನಂತರ ತನ್ನ ನಾಯಿಯನ್ನು ತನ್ನೊಂದಿಗೆ ಕರೆತರುವ ಇಚ್ಛೆಯನ್ನು ಅತ್ತೆ ನಿರಾಕರಿಸಿದ ನಂತರ ಯುವತಿ ತನ್ನ ಮದುವೆಯನ್ನು ರದ್ದುಗೊಳಿಸಿದ್ದಾರೆ. ತನ್ನ ನಾಯಿಯನ್ನು ತನ್ನೊಂದಿಗೆ ತರಲು ಗೆಳೆಯನ ತಾಯಿ ನಿರಾಕರಿಸಿದ ನಂತರ ಭಾರತೀಯ ಯುವತಿ ತನ್ನ ಏಳು ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದಾಳೆ.

ಇತ್ತೀಚೆಗೆ, ಪ್ರಿಯಾಂಕಾ ಎಂಬ ಇಂಟರ್ನೆಟ್ ಬಳಕೆದಾರರು ತಮ್ಮ ಎಕ್ಸ್ ಖಾತೆಯಲ್ಲಿ ತಾವು ಎದುರಿಸಿದ ಅಗ್ನಿಪರೀಕ್ಷೆಯನ್ನು ಹಂಚಿಕೊಂಡಿದ್ದಾರೆ. ತನ್ನ ಗೆಳೆಯನ ತಾಯಿಯಿಂದಾಗಿ 7 ವರ್ಷಗಳ ಸಂಬಂಧವು ಕೊನೆಗೊಂಡಿತು ಎಂದು ಅವರು ಬಹಿರಂಗಪಡಿಸಿದ್ದಾರೆ.

“ನಮ್ಮ ಪೋಷಕರು ಮದುವೆಗೆ ಒಪ್ಪಿದ್ದರು ಆದರೆ ನನ್ನ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ನಾಯಿಯನ್ನು ಸ್ವತಃ ನೋಡಿಕೊಳ್ಳಲು ಸಾಧ್ಯವಿಲ್ಲದಿದ್ದರಿಂದ ನಮ್ಮ ಮದುವೆಯ ಕೆಲವು ದಿನಗಳ ನಂತರ ನನ್ನ ನಾಯಿಯೂ ಸ್ಥಳಾಂತರಗೊಳ್ಳುತ್ತದೆ ಎಂದು ನಾನು ಷರತ್ತು ವಿಧಿಸಿದ್ದೆ. ಆದರೆ ನನ್ನ ಕುಟುಂಬವು ಈಗಾಗಲೇ ನಾಯಿಯನ್ನು ಹೊಂದಿದೆ, ಆದ್ದರಿಂದ ಎರಡು ನಾಯಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಅವರ ತಾಯಿ ನಿರಾಕರಿಸಿದರು” ಎಂದಿದ್ದಾರೆ.

ತನ್ನ ಗೆಳೆಯನಿಗಿಂತ ತನ್ನ ಸಾಕುಪ್ರಾಣಿಯನ್ನು ಆಯ್ಕೆ ಮಾಡಿದ ಹುಡುಗಿಯ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಕೆಳಗೆ ಕಮೆಂಟ್‌ ಮಾಡಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read